ಬೆಂಗಳೂರು: ಡಿಜಿಟಲ್ ಮಾಧ್ಯಮಗಳಿಗಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮಾವಳಿ-2021 (ಮಾಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿ ಮತ್ತು ಮಾಧ್ಯಮ ನೀತಿ ಸಂಹಿತೆ) ಬಗ್ಗೆ ಭಾರತೀಯ ಸಂಪಾದಕರ ಕೂಟ (ಇಜಿಐ) ಕಳವಳ ವ್ಯಕ್ತಪಡಿಸಿದೆ.

‘ಮಾಹಿತಿ ತಂತ್ರಜ್ಞಾನ ಕಾಯ್ದೆ–2000ದ ಅಡಿಯಲ್ಲಿ ಜಾರಿಮಾಡಿರುವ ಈ ನಿಯಮಾ
ವಳಿಗಳು, ಡಿಜಿಟಲ್ ವೇದಿಕೆಯಲ್ಲಿ ಮಾಧ್ಯಮಗಳು ಕೆಲಸ ಮಾಡುವ ರೀತಿ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲೆ ಪರಿಣಾಮ ಉಂಟುಮಾಡುತ್ತವೆ’ ಎಂದು ಕೂಟದ ಅಧ್ಯಕ್ಷರಾದ ಸೀಮಾ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಸಂಜಯ್ ಕಪೂರ್ ಹಾಗೂ ಖಜಾಂಚಿ ಅನಂತ ನಾಥ್ ಅವರು ಪ್ರಕಟಣೆಯ ಮೂಲಕ ಹೇಳಿದ್ದಾರೆ.

‘ದೇಶದ ಯಾವುದೇ ಭಾಗದಲ್ಲಿ ಪ್ರಕಟವಾಗುವ ಸುದ್ದಿಯನ್ನು ನ್ಯಾಯಾಂಗದ ಮೇಲ್ವಿಚಾರಣೆ ಇಲ್ಲದೆಯೇ, ತಡೆಯುವ, ಅಳಿಸುವ ಅಥವಾ ತಿದ್ದುಪಡಿ ಮಾಡುವ ಅಧಿಕಾರವನ್ನು ಈ ನಿಯಮಾವಳಿಗಳು ಕೇಂದ್ರ ಸರ್ಕಾರಕ್ಕೆ ನೀಡುತ್ತವೆ. ಅಲ್ಲದೆ, ಎಲ್ಲಾ ಪ್ರಕಾಶಕರೂ ಕುಂದುಕೊರತೆ ನಿವಾರಣೆಗೆ ಪ್ರತ್ಯೇಕ ವ್ಯವಸ್ಥೆಯನ್ನು ರೂಪಿಸುವಂತೆಯೂ ಒತ್ತಾಯಿಸುತ್ತವೆ. ಹೊಸ ನಿಯಮಾವಳಿಗಳಲ್ಲಿ ಕೆಲವು ಡಿಜಿಟಲ್ ಮಾಧ್ಯಮಕ್ಕೆ ಅಸಮಂಜಸವಾದವುಗಳಾಗಿವೆ’ ಎಂದು ಕೂಟ ಹೇಳಿದೆ.

‘ನಿಯಮಾವಳಿಯನ್ನು ಜಾರಿ ಮಾಡುವ ಸಂದರ್ಭದಲ್ಲಿ ಸಂಬಂಧಿಸಿದ ಸಂಸ್ಥೆಗಳ ಜತೆಗೆ ಸರ್ಕಾರ ಚರ್ಚಿಸಿಲ್ಲ. ಆದ್ದರಿಂದ ಸದ್ಯಕ್ಕೆ ಈ ನಿಯಮಾವಳಿಗಳನ್ನು ತಡೆಹಿಡಿದು, ಸಂಬಂಧಪಟ್ಟವರ ಜತೆಗೆ ಅರ್ಥಪೂರ್ಣ ಚರ್ಚೆ, ಸಂವಾದ ನಡೆಸಬೇಕು. ಅಶಿಸ್ತಿನ ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ನೆಪ
ದಲ್ಲಿ, ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಮುಕ್ತ ಮಾಧ್ಯಮಕ್ಕೆ ಸಂವಿಧಾನಾತ್ಮಕವಾಗಿ ಇರುವ ರಕ್ಷಣೆ
ಯನ್ನು ನಿರಾಕರಿಸಬಾರದು’ ಎಂದು ಕೂಟ ಸರ್ಕಾರವನ್ನು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.