ಮಂಗಳೂರು: ಡಿವಿಜಿ ಬಳಗ ಪ್ರತಿಷ್ಠಾನದ ವತಿಯಂದ ಡಿ.ವಿ. ಗುಂಡಪ್ಪ ಅವರ ಸಮಗ್ರ ಸಾಹಿತ್ಯವನ್ನು ಇಂಗ್ಲಿಷ್‌ಗೆ ಭಾಷಾಂತರಿಸಲು ನಿರ್ಧರಿಸಲಾಗಿದ್ದುಅವರ ಪ್ರಸಿದ್ಧ ಕೃತಿ ‘ಸಂಸ್ಕೃತಿ’ಯ ಇಂಗ್ಲಿಷ್ ಅನುವಾದ ಭಾನುವಾರ ಬಿಡುಗಡೆಯಾಯಿತು.

ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರು ಇಂಗ್ಲಿಷ್‌ಗೆ ಅನುವಾದಿಸಿರುವ ಈ ಪುಸ್ತಕವನ್ನು ಹಿರಿಯ ಸಾಹಿತಿ, ವಿದ್ವಾಂಸ ಎಸ್.ದಿವಾಕರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಡಿವಿಜಿ ಅವರು ಮಂಕುತಿಮ್ಮನ ಕಗ್ಗದ ಮೂಲಕವೇ ಕನ್ನಡಿಗರಿಗೆ ಪರಿಚಿತರು. ಆದರೆ ಅವರು ಪತ್ರಿಕೋದ್ಯ, ಸಾಹಿತ್ಯ ಸೃಷ್ಟಿ ಮತ್ತು ಸಮಾಜ ಸೇವೆಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಾಜಕೀಯದ ಬಗ್ಗೆ ಸಮರ್ಥ ಮುನ್ನೋಟವನ್ನು ಹೊಂದಿದ್ದರೆ. ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಏಕೀಕರಣ ಕಾಯಕಕ್ಕೂ ಸ್ಫೂರ್ತಿ ನೀಡುವ ಬರಹಗಳನ್ನುಅವರು ಬರೆದಿದ್ದರು’ ಎಂದು ಹೇಳಿದರು.

ಪ್ರೊ. ಎಲ್.ಎಸ್. ಶೇಷಗಿರಿ ರಾಯರು ಹಲವು ವರ್ಷಗಳ ಹಿಂದೆಯೇ ಈ ಪುಸ್ತಕವನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದರು. ಆದರೆ ಕಾರಣಾಂತರಗಳಿಂದ ಅದು ಪ್ರಕಟವಾಗಿರಲಿಲ್ಲ. ಇದೀಗ ಡಿವಿಜಿ ಬಳಗ ಪ್ರತಿಷ್ಠಾನದ ಸದಸ್ಯರು ‘ಡಿವಿಜಿ ಗ್ಲೋಬಲ್ ಲಿಟರರಿ ಸಿರೀಸ್’ ಮೂಲಕ ಕನ್ನಡದ ಮಹಾನ್ ವಿದ್ವಾಂಸರೊಬ್ಬರನ್ನುಜಗತ್ತಿಗೆ ಪರಿಚಯಿಸುವ ಪ್ರಯತ್ನ ಶ್ಲಾಘನೀಯ ಎಂದು ಸಾಹಿತಿ, ಅನುವಾದಕ ಎ. ನರಸಿಂಹ ಭಟ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.