ಬೆಂಗಳೂರು: ಎರಡು ತಿಂಗಳ ಅಂತರದಲ್ಲಿಯೇ ಬೆಸ್ಕಾಂ ಮತ್ತೆ ವಿದ್ಯುತ್ ದರ ಹೆಚ್ಚಳ ಮಾಡಲಿದೆ. ಯುನಿಟ್‌ಗೆ 8 ಪೈಸೆ ಹೆಚ್ಚಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅನುಮತಿ ನೀಡಿದೆ.

ಬೇರೆ ಎಸ್ಕಾಂಗಳಿಗೆ ಹೋಲಿಸಿದರೆ, ಬೆಸ್ಕಾಂ ಹೆಚ್ಚು ಶುಲ್ಕ ನಿಗದಿ ಮಾಡಿದೆ. ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ (ಎಫ್‌ಎಸಿ) ಭರಿಸ
ಬೇಕಾಗಿರುವುದರಿಂದ 8 ಪೈಸೆ ಜಾಸ್ತಿ ಮಾಡಲಾಗಿದೆ ಎಂದು ಬೆಸ್ಕಾಂ ಹೇಳಿದೆ.

ಇಂಧನ ವೆಚ್ಚ 1 ಪೈಸೆಯಿಂದ 8 ಪೈಸೆಗೆ ಹೆಚ್ಚಾಗಿದ್ದರಿಂದ ಎಫ್‌ಎಸಿ ಹೆಚ್ಚಳಕ್ಕೆ ಅನುಮತಿ ನೀಡಬೇಕು ಎಂದು ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ನವೆಂಬರ್‌ನಲ್ಲಿ ಕೆಇಆರ್‌ಸಿ ಬೇಡಿಕೆ ಸಲ್ಲಿಸಿದ್ದವು.

ಎಸ್ಕಾಂಗಳ ಮನವಿ ಪುರಸ್ಕರಿಸಿರುವ ಕೆಇಆರ್‌ಸಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ, ಮೆಸ್ಕಾಂ ಮತ್ತು ಜೆಸ್ಕಾಂಗೆ ಯುನಿಟ್‌ಗೆ 5 ಪೈಸೆಯಂತೆ, ಹೆಸ್ಕಾಂಗೆ 4 ಪೈಸೆಯಂತೆ ಹೆಚ್ಚಳ ಮಾಡಲು ಅನುಮತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.