ಶ್ರೀರಂಗಪಟ್ಟಣ: ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಸ್ಥಿ ವಿಸರ್ಜನೆ ಕಾರ್ಯ ಶುಕ್ರವಾರ ಪಟ್ಟಣದ ಕಾವೇರಿ ನದಿ ತೀರದ ಸೋಪಾನ ಕಟ್ಟೆಯ ಬಳಿ ನಡೆಯಿತು.

ಸ್ಪಂದನಾ ಅವರ ಪುತ್ರ ಶೌರ್ಯ ಅಸ್ಥಿ ವಿಸರ್ಜಿಸಿದರು. ಅದಕ್ಕೂ ಮುನ್ನ ಬೆಂಗಳೂರಿನಿಂದ ತಂದ ಅಸ್ಥಿ ಕುಡಿಕೆಯನ್ನು ನದಿ ದಡದ ಗೌತಮ ಮಂಟಪದಲ್ಲಿಟ್ಟು ಪೂಜಿಸಲಾಯಿತು. ಪಂಚಗವ್ಯದಿಂದ ಶುದ್ದೀಕರಿಸಲಾಯಿತು. ಶೌರ್ಯ ಅವರು ಕೇಶ ಮುಂಡನ ಮಾಡಿಸಿ ಸಂಕಲ್ಪ, ಅಸ್ಥಿ ನಾರಾಯಣ ಪೂಜೆ, ಲಾಜಾ ಅರ್ಪಣೆ, ದಹಿಷ್ಣು ಪಂಚಕ ನಕ್ಷತ್ರ ಹೋಮ ಮಾಡಿದರು. ಪಿಂಡ ಪ್ರದಾನ ಪ್ರಕ್ರಿಯೆಯ ಬಳಿಕ ಅಸ್ಥಿ ಸಂಚಯನ ನಡೆಯಿತು.

ವೈದಿಕರಾದ ರಮೇಶ ಶರ್ಮಾ ಅವರ ನೇತೃತ್ವದ ತಂಡ ನೇತೃತ್ವ ವಹಿಸಿತ್ತು. ವಿಜಯ್ ರಾಘವೇಂದ್ರ, ನಟ ಶ್ರೀಮುರಳಿ, ತಂದೆ ಎಸ್.ಎ. ಚಿನ್ನೇಗೌಡ, ಸ್ಪಂದನಾ ತಂದೆ ಬಿ.ಕೆ. ಶಿವರಾಂ, ಚಿಕ್ಕಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಚಿನ್ನೇಗೌಡ ಅವರ ಸಹೋದರರಾದ ಎಸ್.ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.