ಬೆಂಗಳೂರು: ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಜನರ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಆನ್‌ಲೈನ್ ಖದೀಮರು, ಇದೀಗ ‘ಗೂಗಲ್ ಡಾಟ್ ಕಾಮ್’ ಸರ್ಚ್ ಎಂಜಿನನ್ನೇ ತಮ್ಮ ಕೃತ್ಯಕ್ಕೆ ಬಳಸಿಕೊಂಡು ಲಕ್ಷಾಂತರ ರೂಪಾಯಿ ದೋಚುತ್ತಿದ್ದಾರೆ.

ಬ್ಯಾಂಕ್, ವಿಮಾನಯಾನ, ಹಣಕಾಸು ಹಾಗೂ ನಗದು ವರ್ಗಾವಣೆ ಕಂಪನಿಗಳು ತಮ್ಮ ಸೇವೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲು ಮತ್ತು ಸಮಸ್ಯೆ ಇತ್ಯರ್ಥಪಡಿಸಲು ಹೆಲ್ಪ್ ಡೆಸ್ಕ್‌ಗಳ ವ್ಯವಸ್ಥೆ ಮಾಡಿವೆ. ಅಂಥ ಹೆಲ್ಪ್ ಡೆಸ್ಕ್‌ಗಳ ಸಂಖ್ಯೆಗಳನ್ನು ‘ಗೂಗಲ್ ಡಾಟ್ ಕಾಮ್’ನಲ್ಲಿ ನಮೂದು ಮಾಡಿವೆ. ಆ ಸಂಖ್ಯೆಗಳನ್ನು ಬದಲಿಸಿ ತಮ್ಮ ದೂರವಾಣಿ ಸಂಖ್ಯೆಗಳನ್ನು ಸೇರಿಸುತ್ತಿರುವ ಖದೀಮರು, ಕರೆ ಮಾಡುವ ಜನರ ದಿಕ್ಕು ತಪ್ಪಿಸಿ ಖಾತೆಗೆ ಕನ್ನ ಹಾಕುತ್ತಿದ್ದಾರೆ.

ಇಂತಹ ಕೃತ್ಯಗಳಿಂದಾಗಿ ಹಣ ಕಳೆದುಕೊಂಡಿರುವ 50ಕ್ಕೂ ಹೆಚ್ಚು ಮಂದಿ, ’ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಹೆಲ್ಪ್ ಡೆಸ್ಕ್‌ಗಳಿಗೆ ಕರೆ ಮಾಡಿ, ಸಮಸ್ಯೆ ಹೇಳಿಕೊಂಡರೆ ವಂಚನೆ ಮಾಡಲಾಗಿದೆ’ ಎಂದು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಸಹ ಪೊಲೀಸರಿಗೆ ದೂರು ನೀಡಿದ್ದು, ‘ವಂಚನೆಗೂ ತಮಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿವೆ.

‘ಇದುವರೆಗೂ ಖದೀಮರು, ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ಕರೆ ಮಾಡಿ ಒನ್ ಟೈಂ ಪಾಸ್‌ವರ್ಡ್ (ಒಟಿಪಿ) ಪಡೆದುಕೊಂಡು ವಂಚಿಸುತ್ತಿದ್ದರು. ಇದೀಗ ಜನರೇ ಅವರಿಗೆ ಕರೆ ಮಾಡಿ ಜಾಲದೊಳಗೆ ಸಿಲುಕಿಕೊಂಡು ಹಣ ಕಳೆದುಕೊಳ್ಳುತ್ತಿದ್ದಾರೆ’ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.

‘ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ದೂರು ನೀಡಿದ್ದಾರೆ. ಖದೀಮರು ಬದಲಾಯಿಸಿದ್ದ ಬ್ಯಾಂಕ್‌ಗಳ ಹಾಗೂ ಕಂಪನಿಗಳ ಸಹಾಯವಾಣಿ ಮತ್ತು ಕಚೇರಿಗಳ ಸಂಖ್ಯೆಗಳನ್ನು ತಿದ್ದುಪಡಿ ಮಾಡಿ, ಸರಿಯಾದ ಸಂಖ್ಯೆ ನಮೂದಿಸಲಾಗಿದೆ. ಅಷ್ಟಾದರೂ ವಂಚಕರು ಪದೇ ಪದೇ ಸಂಖ್ಯೆ ಬದಲಾಯಿಸುತ್ತಿದ್ದಾರೆ. ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಗೂಗಲ್ ಕಂಪನಿಯ ಪ್ರತಿನಿಧಿಗೂ ಇ–ಮೇಲ್ ಕಳುಹಿಸಲಾಗಿದೆ’ ಎಂದು ತಿಳಿಸಿದರು.

ಇಂಡಿಗೊ ಏರ್‌ಲೈನ್ಸ್ ಹೆಸರಿನಲ್ಲಿ ವಂಚನೆ: ‘ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ಎಚ್. ವಂಶಿಕೃಷ್ಣ ಎಂಬುವರು ಬರೋಡಾಗೆ ಹೋಗಲು ಇಚ್ಛಿಸಿದ್ದರು.ಗೂಗಲ್ ಸರ್ಚ್ ಮಾಡಿ ‘ಇಂಡಿಗೊ ಏರ್‌ಲೈನ್ಸ್’ ಕಂಪನಿ ವಿಮಾನ ಟಿಕೆಟ್ ಬುಕ್ಕಿಂಗ್ ಸಂಖ್ಯೆಗೆ ಕರೆ ಮಾಡಿದ್ದರು’

ಕರೆ ಸ್ವೀಕರಿಸಿದ್ದ ವ್ಯಕ್ತಿ, ಟಿಕೆಟ್‌ಗೆ ಹಣ ಪಾವತಿಸುವಂತೆ ಹೇಳಿ ಕಾರ್ಡ್ ಮಾಹಿತಿ ಹಾಗೂ ಒಟಿಪಿ ಪಡೆದುಕೊಂಡಿದ್ದ. ನಿಮಿಷದಲ್ಲೇ ಖಾತೆಯಲ್ಲಿದ್ದ ₹38,799 ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದ’ ಎಂದು ಪೊಲೀಸರು ಹೇಳಿದರು.

ಪೇಟಿಎಂ ಹೆಸರಿನಲ್ಲೂ ವಂಚನೆ:‘ಕೆ.ಉಮೇಶ್ ಎಂಬುವರು, ಪೇಟಿಎಂ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಿದ್ದರು. ಆದರೆ, ಬಿಲ್ ಪಾವತಿ ಆಗಿರಲಿಲ್ಲ. ಗೂಗಲ್ ಸರ್ಚ್ ಮಾಡಿ ಪೇಟಿಎಂ ಸಹಾಯವಾಣಿಗೆ ಕರೆ ಮಾಡಿದ್ದರು. ಪ್ರತಿನಿಧಿ ಸೋಗಿನಲ್ಲಿ ಮಾತನಾಡಿದ್ದ ಖದೀಮ, ಎಟಿಎಂ ಕಾರ್ಡ್ ಮಾಹಿತಿ ಹಾಗೂ ಒಟಿಪಿ ಪಡೆದು ₹49,999 ಹಣವನ್ನು ಮಹೀಂದ್ರ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ’ ಎಂದು ಪೊಲೀಸರು ವಿವರಿಸಿದರು.

ಖದೀಮರ ವಂಚನೆ ಹೇಗಿದೆ ಗೊತ್ತಾ?

‘ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಸಮಸ್ಯೆ, ನಗದು ವರ್ಗಾವಣೆ ಸಮಸ್ಯೆ, ವಿಮಾನಗಳ ಟಿಕೆಟ್ ಬುಕ್ಕಿಂಗ್, ಸೌಲಭ್ಯಗಳ ಬಗ್ಗೆ ತಿಳಿಯಲು ಬಹುಪಾಲು ಗ್ರಾಹಕರು, ಬ್ಯಾಂಕ್ ಹಾಗೂ ಆಯಾ ಸಂಸ್ಥೆಗಳ ಸಹಾಯವಾಣಿಗೆ ಕರೆ ಮಾಡುತ್ತಾರೆ. ಅದರಲ್ಲೂ ಕೆಲವರು, ಸಹಾಯವಾಣಿ ಹಾಗೂ ಕಚೇರಿಗಳ ಸಂಖ್ಯೆ ತಿಳಿಯಲು ಗೂಗಲ್ ಸರ್ಚ್ ಎಂಜಿನ್ ಮೊರೆ ಹೋಗುತ್ತಾರೆ’ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.

‘ಗೂಗಲ್‌ನಲ್ಲಿ ಸಿಗುವ ಸಂಖ್ಯೆಗೆ ಕರೆ ಮಾಡುತ್ತಿದ್ದಂತೆ ವ್ಯಕ್ತಿಯೊಬ್ಬ, ‘ಹೇಳಿ ನಿಮಗೆ ಏನು ಸಹಾಯ ಮಾಡಲಿ’ ಎನ್ನುತ್ತ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮಾಹಿತಿ ಮತ್ತು ಒಟಿಪಿ ಪಡೆದುಕೊಳ್ಳುತ್ತಾನೆ. ಅದಾಗಿ ನಿಮಿಷದಲ್ಲೇ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾನೆ’ ಎಂದರು.

ಯಾರು ಬೇಕಾದರೂ ಮಾಹಿತಿ ಬದಲಿಸಬಹುದು

ಗೂಗಲ್‌ನಲ್ಲಿ ನಮೂದಿಸುವ ಮಾಹಿತಿಯನ್ನು ಯಾರು ಬೇಕಾದರೂ ಬದಲಾಯಿಸುವ ಅವಕಾಶವಿದೆ. ಅದನ್ನೇ ದುರುಪಯೋಗಪಡಿಸಿಕೊಂಡ ಖದೀಮರು, ವಂಚನೆಗೆ ಇಳಿದಿದ್ದಾರೆ.

‘ಸಂಖ್ಯೆ ಬದಲಾವಣೆ ವೇಳೆ ಕೆಲವು ಪ್ರಶ್ನೆಗಳಿಗೆ ಹೌದು ಅಥವಾ ಅಲ್ಲ ಎಂಬ ಉತ್ತರವನ್ನಷ್ಟೇ ನೀಡಬೇಕು. ಸಂಖ್ಯೆ ಬದಲಾವಣೆಯಾದ ಬಳಿಕ ಬ್ಯಾಂಕ್ ಹಾಗೂ ಕಂಪನಿಗಳಿಗೂ ಯಾವುದೇ ಮಾಹಿತಿ ಇರುವುದಿಲ್ಲ. ಖದೀಮರಿಗಷ್ಟೇ ಆ ಸಂಖ್ಯೆ ಗೊತ್ತಿರುತ್ತದೆ. ಅದನ್ನೇ ನಂಬಿ ಜನರು, ಕರೆ ಮಾಡಿ ವಂಚನೆಗೀಡಾಗುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ಗೂಗಲ್ ಸರ್ಚ್ ಮಾಡಿ, ಅಲ್ಲಿ ಸಿಗುವ ಸಂಖ್ಯೆಗೆ ಕರೆ ಮಾಡುವ ಮುನ್ನ ಜನರು ಎಚ್ಚರಿಕೆ ವಹಿಸಬೇಕು

– ಸೈಬರ್ ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.