ಭೋಜನ ವ್ಯವಸ್ಥೆಗೆ ₹ 8 ಕೋಟಿ ವೆಚ್ಚ!
‘ಭೋಜನ ವ್ಯವಸ್ಥೆಗೆ ₹ 4 ಕೋಟಿ ವೆಚ್ಚ ಅಂದಾಜಿಸಿದ್ದೆವು. ಅದು ₹ 8 ಕೋಟಿ ಆಗಿದೆ. ಅಲ್ಲದೆ, ಈ ಹಿಂದೆ ಸಮ್ಮೇಳನಗಳಿಗೆ ಅನುದಾನ ಹೊರತುಪಡಿಸಿ, ಆಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಸರ್ಕಾರದಿಂದ ಪ್ರತ್ಯೇಕವಾಗಿ ಹಣ ಕೊಡಲಾಗಿತ್ತು. ಆದರೆ, ಈ ಬಾರಿ ಹಣ ನೀಡದೇ ಇರುವುದರಿಂದ ಕೊನೆಕ್ಷಣದಲ್ಲಿ ಸರ್ಕಾರ ಸಮ್ಮೇಳನಕ್ಕೆ ಕೊಟ್ಟ ₹ 20 ಕೋಟಿಯಲ್ಲಿ ₹ 2 ಕೋಟಿಯನ್ನು ಜಿಲ್ಲಾ ಕಸಾಪಕ್ಕೆ ಕೊಡುವಂತೆ ಸೂಚನೆ ಬಂದಿತ್ತು. ಹೀಗಾಗಿ, ಕನ್ನಡ ಸಾಹಿತ್ಯ ಪರಿಷತ್‌ಗೆ ₹ 2 ಕೋಟಿ ನೀಡಲಾಗಿದೆ. ಸಮ್ಮೇಳನ ಮುಗಿದ ನಂತರ ಇನ್ನೂ ₹ 60 ಲಕ್ಷ ಹೆಚ್ಚುವರಿಯಾಗಿ ಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಕೋರಿದೆ. ಹೆಚ್ಚುವರಿಯಾಗಿ ಕೇಳಿದ ₹ 5 ಕೋಟಿಯಲ್ಲಿ ಅನುದಾನದಲ್ಲಿ ಈ ₹ 60 ಲಕ್ಷ ಕೂಡಾ ಸೇರಿದೆ’ ಎಂದು ರಘುನಂದನ ಮೂರ್ತಿ ತಿಳಿಸಿದರು.