ಬೆಂಗಳೂರು: ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಗಳ ಫಲಕ ಅಳವಡಿಸುವಂತೆ ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಸೆಕ್ಷನ್ 10(1) ಕೆಪಿಎಂಇ ಕಾಯ್ದೆ ಅನ್ವಯ ರಾಜ್ಯದಲ್ಲಿನ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಹೊರರೋಗಿಗಳ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಎಕ್ಸ್–ರೇ, ಸ್ಕ್ಯಾನಿಂಗ್, ಡಯಾಗ್ನಸ್ಟಿಕ್ ಸೇವೆ ಸೇರಿದಂತೆ ವಿವಿಧ ಚಿಕಿತ್ಸಾ ದರಗಳ ಪಟ್ಟಿಯನ್ನು ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಕಾಣಿಸುವಂತೆ ಮುಖ್ಯ ಪ್ರವೇಶ ದ್ವಾರದ ಸೂಚನಾ ಫಲಕಗಳಲ್ಲಿ ಹಾಕಬೇಕು. ಜತೆಗೆ, ಈ ಚಿಕಿತ್ಸಾ ದರಗಳನ್ನು ಕಿರುಹೊತ್ತಿಗೆ ಮತ್ತು ಕೈಪಿಡಿ ರೂಪದಲ್ಲಿಯೂ ಪ್ರಕಟಿಸಬೇಕು ಎಂದು ಸೂಚಿಸಿದ್ದಾರೆ.

ಚಿಕಿತ್ಸೆ, ಸಮಾಲೋಚನೆ ಮತ್ತು ಡಯಾಗ್ನೊಸ್ಟಿಕ್ ಸೇವೆಗಳಿಗೆ ಸೂಚನಾ ಫಲಕಗಳಲ್ಲಿ ನಮೂದಿಸಿರುವ ದರಗಳನ್ನೇ ಪಡೆಯಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಹಲವು ಖಾಸಗಿ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸಾ ದರಗಳನ್ನು ಪ್ರದರ್ಶಿಸದಿರುವುದು ಗಮನಕ್ಕೆ ಬಂದಿದೆ.ಈ ಬಗ್ಗೆ ರೋಗಿಗಳು, ಅವರ ಸಂಬಂಧಿಕರು ಮತ್ತು ಜನಪ್ರತಿನಿಧಿಗಳು ದೂರುಗಳನ್ನು ಸಹ ಸಲ್ಲಿಸಿದ್ದಾರೆ. ಹೀಗಾಗಿ, ಯಾವುದೇ ಆಸ್ಪತ್ರೆ, ಕ್ಲಿನಿಕ್‌ಗಳು ಅಥವಾ
ಪ್ರಯೋಗಾಲಯಗಳಲ್ಲಿ ದರಗಳನ್ನುಪ್ರಕಟಿಸದಿದ್ದರೆ ಕೆಪಿಎಂಇ ಕಾಯ್ದೆ ಸೆಕ್ಷನ್ 15(2)ರ ಅನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.