ಬೆಂಗಳೂರು: ಉಪಚುನಾವಣೆ ನಡೆದ 15 ಕ್ಷೇತ್ರಗಳಲ್ಲೇ ಬಂಡಾಯದ ಕಾರಣದಿಂದಾಗಿಯೇ ಸದ್ದು ಮಾಡಿದ್ದ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ‘ಸ್ವಾಭಿಮಾನ’ದ ಅಲೆಯಲ್ಲಿ ತೇಲುತ್ತ ಗೆಲುವಿನ ದಡ ಸೇರಿದ್ದಾರೆ.

ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ (ಶರತ್ ಅವರ ತಂದೆ) ಕುಟುಂಬ ಹಾಗೂ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ರಾಜ್ಯದ ಅತ್ಯಂತ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜ್ ಕುಟುಂಬದ ನಡುವೆ ಹಿಂದಿನಿಂದಲೂ ಬದ್ಧ ವೈಷಮ್ಯ. ಕಾಂಗ್ರೆಸ್‌ಗೆ ಎಂಟಿಬಿ ಕೈಕೊಟ್ಟು ಕಮಲ ಪಾಳಯಕ್ಕೆ ಜಿಗಿದಂದಿನಿಂದಲೇ ಈ ಕ್ಷೇತ್ರದ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿತ್ತು.

ಹೆಬ್ಬಾಳ ಶಾಸಕ ಬಿ.ಎಸ್.ಸುರೇಶ್ ಅವರ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್ ಪಕ್ಷದ ಮತಗಳನ್ನು ಉಳಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿತು. ಅದಕ್ಕೆ ಪೂರಕವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ವಿರುದ್ಧ ಮೂರು ಸಲ ಪ್ರಚಾರ ಕೈಗೊಳ್ಳುವ ಮೂಲಕಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಕುರುಬ ಸಮುದಾಯದ ಮತ ಸಾರಾಸಗಟಾಗಿ ನಾಗರಾಜ್ ಪಾಲಾಗುವುದನ್ನು ತಡೆದರು. ಬಿಜೆಪಿ ಮತಗಳ ಜೊತೆಗೆ ತನ್ನ ವರ್ಚಸ್ಸೂ ಕೈಹಿಡಿಯಲಿದೆ ಎಂದು ನಂಬಿ ಪಕ್ಷಾಂತರ ಮಾಡಿದ್ದ ನಾಗರಾಜ್ ನಿರಾಶೆ ಅನುಭವಿಸಬೇಕಾಯಿತು.

2018ರ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋತಿದ್ದ ಶರತ್, ಈ ಸಲ ಆರಂಭದಿಂದಲೇ ಕಾರ್ಯತಂತ್ರ ರೂಪಿಸಿ ಗೆಲುವಿನ ನಗೆ ಬೀರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.