ಬೆಂಗಳೂರು: ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ಅಂತಿಮ ವಿಧಿವಿಧಾನಕ್ಕೆ ವಿದ್ಯಾಪೀಠದಲ್ಲಿ ಸಿದ್ಧತೆ ನಡೆದಿದೆ. ಸುಮಾರು ಮೂರು ಸಾವಿರ ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಗಣ್ಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ.

ವಿದ್ಯಾಪೀಠದ ಬೃಂದಾವನ ತಾಣದತ್ತ ಯಾರನ್ನೂ ಹೋಗಲು ಬಿಡುತ್ತಿಲ್ಲ. ಇದು ಖಾಸಗಿ ಕಾರ್ಯಕ್ರಮವಾದದ್ದರಿಂದ ಮಾಧ್ಯಮದವರು ಸಹ ಅಲ್ಲಿಗೆ ತೆರಳುವಂತಿಲ್ಲ ಎಂದು ವಿದ್ಯಾಪೀಠದ ವ್ಯವಸ್ಥಾಪಕರು ಹೇಳುತ್ತಿದ್ದಾರೆ.

ನೂಕುನುಗ್ಗಲು

ಗುರುಗಳನ್ನು ಕೊನೆಯ ಬಾರಿಗೆ ಕಣ್ತಂಬಿಕೊಳ್ಳಬೇಕು ಎಂದು ಸಾವಿರಾರು ಮಂದಿ ಕಾಯುತ್ತಿದ್ದು, ವಿದ್ಯಾಪೀಠದ ಹೊರಭಾಗದಲ್ಲಿ ಪಾಸ್ಗಾಗಿ ಒಂದಿಷ್ಟು ನೂಕುನುಗ್ಗಲು ಸಹ ಉಂಟಾಯಿತು. ಪಾಸ್ ಮುಗಿದ ಕಾರಣ ಇದೀಗ ಎಲ್ಲರಿಗೂ ಒಳಗೆ ಪ್ರವೇಶಿಸಲು ಮುಕ್ತ ಅವಕಾಶ ನೀಡಲಾಗಿದೆ.

ಬಿಗಿ ಭದ್ರತೆ

ಶ್ವಾನದಳವನ್ನು ಕರೆಸಿ ಪೇಜಾವರ ಶ್ರೀಗಳಿಗೆ ಅಂತಿಮ ಗೌರವ ನೀಡುವ ಸ್ಥಳದಲ್ಲಿ ತಪಾಸಣೆ ನಡೆಸಲಾಯಿತು. ವಿದ್ಯಾಪೀಠಕ್ಕೆ ಬರುವ ಕತ್ರಿಗುಪ್ಪೆ ಮುಖ್ಯರಸ್ತೆ, ಶ್ರೀನಿವಾಸನಗರ ಸಹಿತ ಹಲವೆಡೆ ಬ್ಯಾರಿಕೇಡ್ಗಳನ್ನು ಇಟ್ಟು ಭಾರಿ ವಾಹನಗಳ ಸಂಚಾರಕ್ಕೆ ತಡೆ ಒಡ್ಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.