ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 59 ಬಾಂಗ್ಲಾ ಪ್ರಜೆಗಳನ್ನು ಅವರ ದೇಶಕ್ಕೆ ವಾಪಸು ಕಳುಹಿಸುವಲ್ಲಿ ಪೂರ್ವ ವಿಭಾಗದ ಪೊಲೀಸರ ತಂಡ ಯಶಸ್ವಿಯಾಗಿದೆ.

ಬಾಂಗ್ಲಾ ಪ್ರಜೆಗಳ ಗಡಿಪಾರಿಗೆ ಕೋಲ್ಕತ್ತಾದಲ್ಲಿ ವಿರೋಧ ವ್ಯಕ್ತವಾಗಿತ್ತು. ಕೆಲವು ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದರು. ಗಡಿಪಾರು ಕಷ್ಟವೆಂಬ ಸ್ಥಿತಿ ನಿರ್ಮಾಣವಾಗಿತ್ತು. ಅದರ ನಡುವೆಯೇ ಬಿಎಸ್ಎಫ್ ಅಧಿಕಾರಿಗಳ ನೆರವಿನಿಂದ ಅಕ್ರಮ ವಲಸಿಗರನ್ನು ಹಂತ ಹಂತವಾಗಿ ಅವರ ದೇಶಕ್ಕೆ ಕಳುಹಿಸಲಾಗಿದೆ.

‘ರಾಮಮೂರ್ತಿನಗರ ಹಾಗೂ ಮಾರತ್ತಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಸಿಕ್ಕಿಬಿದ್ದಿದ್ದ 22 ಮಹಿಳೆಯರು ಸೇರಿದಂತೆ 59 ಬಾಂಗ್ಲಾ ಪ್ರಜೆಗಳನ್ನು ಕರೆದುಕೊಂಡು ಕೋಲ್ಕತ್ತಾಕ್ಕೆ ಹೋಗಿದ್ದೆವು. ಅವರೆಲ್ಲರನ್ನೂ ಸೇನೆ ವಶಕ್ಕೆ ನೀಡಿ ಗಡಿ ದಾಟಿಸಿ ವಾಪಸು ನಗರಕ್ಕೆ ಬಂದಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಂಗ್ಲಾ ವಲಸಿಗರು ಅಮಾಯಕರೆಂದು ವಾದಿಸಿದ್ದ ಕೆಲವು ಸಂಘಟನೆಗಳ ಸದಸ್ಯರು ನಮ್ಮ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ಹೀಗಾಗಿ, ಗಡಿಪಾರು ಪ್ರಕ್ರಿಯೆ ವಿಳಂಬವಾಯಿತು. ನಂತರ, 59 ಮಂದಿಯನ್ನು ನಾಲ್ಕು ತಂಡಗಳ ಮೂಲಕ ಗಡಿಪಾರು ಮಾಡಲಾಗಿದೆ. ಇನ್ನೊಂದು ತಂಡದಲ್ಲಿರುವ ವಲಸಿಗರು ಸದ್ಯ ಸೇನೆ ವಶದಲ್ಲಿದ್ದಾರೆ. ಅವರ ಗಡಿಪಾರು ಪ್ರಕ್ರಿಯೆ ಕೂಡಾ ಶ್ರೀಘ್ರ ಮುಕ್ತಾಯಗೊಳ್ಳಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.