ನವದೆಹಲಿ: ಅಕ್ರಮ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಶುಕ್ರವಾರ ಜಾರಿ ನಿರ್ದೇಶನಾಲಯ (ಇ.ಡಿ)ದ ವಿಚಾರಣೆ ಎದುರಿಸಿದರು.

ಇಲ್ಲಿನ ಖಾನ್ ಮಾರುಕಟ್ಟೆ ಪ್ರದೇಶದಲ್ಲಿರುವ ಲೋಕನಾಯಕ ಕಟ್ಟಡದಲ್ಲಿನ ಇ.ಡಿ ಕಚೇರಿಗೆ ಬೆಳಿಗ್ಗೆ ಕೆಲವು ದಾಖಲೆಗಳೊಂದಿಗೆ ಹಾಜರಾದ ಜಮೀರ್, ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದರು.

‘ತನಿಖಾಧಿಕಾರಿಗಳ ಸೂಚನೆ ಮೇರೆಗೆ ಎರಡು ವಾರಗಳ ಹಿಂದೆ ಅಗತ್ಯ ದಾಖಲೆ ಸಲ್ಲಿಸಿದ್ದೆ. ನಾಲ್ಕೈದು ವಿಚಾರಗಳ ಬಗ್ಗೆ ಸ್ಪಷ್ಟನೆ ಕೇಳಿದ್ದು, ಸೂಕ್ತ ಉತ್ತರ ನೀಡಿದ್ದೇನೆ’ ಎಂದು ವಿಚಾರಣೆ ನಂತರ ಜಮೀರ್ ಸುದ್ದಿಗಾರರಿಗೆ ತಿಳಿಸಿದರು.

‘ಐಎಂಎ ವಂಚನೆ ಪ್ರಕರಣಕ್ಕೂ, ಈ ವಿಚಾರಣೆಗೂ ಸಂಬಂಧ ಇಲ್ಲ. ನನ್ನ ನಿವಾಸದ ಮೇಲೆ ನಡೆದ ದಾಳಿ, ಸಾರಿಗೆ ವ್ಯವಹಾರದ ಬಗ್ಗೆ ಮಾಹಿತಿ ಕೇಳಲಾಯಿತು. ಮನೆ ಕಟ್ಟಲು ಖರೀದಿಸಲಾದ ಭೂಮಿಯ ಬಗ್ಗೆಯೂ ಮಾಹಿತಿ ನೀಡಿದ್ದೇನೆ’ ಎಂದು ಅವರು ವಿವರಿಸಿದರು.

ವಿಚಾರಣೆಯ ಸಂಪೂರ್ಣ ವಿವರ ನೀಡಲು ಸಾದ್ಯವಿಲ್ಲ. ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿಲ್ಲ. ಅವಶ್ಯಕತೆ ಇದ್ದರೆ ಕರೆ ಕಳುಹಿಸುವುದಾಗಿ ಅಥವಾ ದೂರವಾಣಿ ಮೂಲಕವೇ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ ಜಮೀರ್, ಇನ್ನೂ ನಾಲ್ಕು ದಿನ ದೆಹಲಿಯಲ್ಲೇ ಇರುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.