ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಯಾವುದೇ ದೀರ್ಘಕಾಲಿಕ ಬೆಳೆಗಳಿಗೆ ಅನುಮತಿ ನೀಡದಿದ್ದರೂ ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಿಂದ ತಮಿಳುನಾಡು ಫೆಬ್ರುವರಿಯಿಂದ ಮೇ ಅಂತ್ಯದವರೆಗೆ 35 ಟಿಎಂಸಿ ನೀರು ಬಳಸಿಕೊಂಡಿದೆ ಎಂದು ಕರ್ನಾಟಕ ಆಕ್ರೋಶ ವ್ಯಕ್ತಪಡಿಸಿದೆ.

ನವದೆಹಲಿಯಲ್ಲಿ ಮಂಗಳವಾರ ನಡೆದ ಪ್ರಾಧಿಕಾರದ 31ನೇ ಸಭೆಯಲ್ಲಿ ತಮಿಳುನಾಡು ನಡೆಗೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿತು.

‘ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಜೂನ್ ತಿಂಗಳಲ್ಲಿ ಸಂಚಿತ ಒಳಹರಿವು 7.3 ಟಿಎಂಸಿ. ಆದರೆ, ಇದೇ ಅವಧಿಯಲ್ಲಿ 30 ವರ್ಷಗಳ ಸರಾಸರಿ ಒಳಹರಿವು 24 ಟಿಎಂಸಿ. ಪ್ರಸ್ತುತ ವರ್ಷದ ಒಳಹರಿವನ್ನು 30 ವರ್ಷಗಳ ಒಳಹರಿವಿನ ಸರಾಸರಿಗೆ ಹೋಲಿಸಿದರೆ ಶೇಕಡ 29.8ರಷ್ಟು ಕಡಿಮೆ ಇದೆ’ ಎಂದು ಕರ್ನಾಟಕದ ಅಧಿಕಾರಿಗಳು ಪ್ರಾಧಿಕಾರದ ಗಮನಕ್ಕೆ ತಂದರು.

‘ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಶೇ 70.1ರಷ್ಟು ಸಂಕಷ್ಟದ ಪರಿಸ್ಥಿತಿ ಇದೆ. ರಾಜ್ಯವು ಕುಡಿಯುವ ನೀರಿಗಾಗಿ ಆದ್ಯತೆ ನೀಡುತ್ತಿದೆ. ಕಾಲುವೆಗಳಿಗೆ ನೀರು ಬಿಡುತ್ತಿಲ್ಲ. ಆದರೆ, ತಮಿಳುನಾಡು ತನ್ನ ಜಲಾಶಯಗಳಿಂದ 3.97 ಟಿಎಂಸಿಯಷ್ಟು ನೀರನ್ನು ನದಿಗೆ ಬಿಡುಗಡೆ ಮಾಡುತ್ತಿದೆ’ ಎಂದು ದೂರಿದರು. ಜುಲೈ ಅಂತ್ಯದವರೆಗಿನ ಹೈಡ್ರಾಲಜಿಕಲ್ ಸನ್ನಿವೇಶ ಪರಿಗಣಿಸಿ, ಪರಿಸ್ಥಿತಿ ಗಮನಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರಾಧಿಕಾರಕ್ಕೆ ಮನವಿ ಮಾಡಿದರು.

ರಾಜ್ಯದಲ್ಲಿನ ಮುಂಗಾರು ಮತ್ತು ನಾಲ್ಕು ಜಲಾಶಯಗಳ ಒಳಹರಿವನ್ನು ಪರಿಗಣಿಸಿ ನೀರು ಬಿಡುಗಡೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಹುವುದು ಎಂದು ಅವರು ಸ್ಪಷ್ಟಪಡಿಸಿದರು.

ಸುಪ್ರೀಂ ಕೋರ್ಟ್ ಮಾರ್ಪಡಿಸಿದ ಆದೇಶದ ಪ್ರಕಾರ, ಜೂನ್ ತಿಂಗಳ ಬಾಕಿ 5.3 ಟಿಎಂಸಿ ಹಾಗೂ ಜುಲೈ ತಿಂಗಳ 31.24 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಒತ್ತಾಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.