ಬೆಂಗಳೂರು: ಮಧ್ಯಪ್ರದೇಶದ ಭೋಪಾಲ್ನಲ್ಲಿನ ಜಾಗ್ರಣ್ ಲೇಕ್ಸಿಟಿ ವಿಶ್ವವಿದ್ಯಾಲಯದ (ಜೆಎಲ್ಯು) ನೂತನ ಕುಲಪತಿಯಾಗಿ ಶಿಕ್ಷಣ ತಜ್ಞ, ಸಂಶೋಧಕ ಡಾ. ಸಂದೀಪ್ ಶಾಸ್ತ್ರಿ ನೇಮಕಗೊಂಡಿದ್ದಾರೆ.

‘ಲೇಖಕರು, ರಾಜಕೀಯ ವಿಶ್ಲೇಷಕರೂ ಆಗಿರುವ ಸಂದೀಪ್ ಶಾಸ್ಟ್ರಿಯವರು ಕುಲಪತಿಯಾಗಿ ಬಂದಿರುವುದು ಸಂತಸದ ವಿಷಯದ’ ಎಂದು ಜೆಎಲ್ಯು ವಿಶ್ವವಿದ್ಯಾಲಯ ಪ್ರಕಟಣೆ ಹೇಳಿದೆ.

‘ಸಂದೀಪ್ ಶಾಸ್ತ್ರಿ ಜ.1ರಿಂದಲೇ ಅಧಿಕಾರ ವಹಿಸಿಕೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ದಶಕಗಳ ಅನುಭವ ಹೊಂದಿರುವ ಶಾಸ್ತ್ರಿ, ವಿಶ್ವವಿದ್ಯಾಲಯವನ್ನು ಮತ್ತಷ್ಟು ಯಶಸ್ಸಿನತ್ತ ಕೊಂಡೊಯ್ಯುವ ವಿಶ್ವಾಸವಿದೆ’ ಎಂದು ಅದು ಹೇಳಿದೆ.

ಜೈನ್ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಕೆಲಸ ಮಾಡಿರುವ ಅನುಭವ ಹೊಂದಿರುವ ಶಾಸ್ತ್ರಿಯವರು, ಸಮಾಜ ವಿಜ್ಞಾನ ಮತ್ತು ಶಿಕ್ಷಣ ಸಂಶೋಧನಾ ಸಂಸ್ಥೆಯ (ಸಿಇಆರ್ಎಸ್ಎಸ್ಇ) ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.