ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಡಿ ಭಾಷಾ ಶಿಕ್ಷಣಕ್ಕೆ ಸಂಬಂಧಿಸಿ ದಂತೆ ಸಿದ್ಧಪಡಿಸಿದ ವರದಿಯಲ್ಲಿ (ಪೊಸಿಷನ್ ಪೇಪರ್) 1 ರಿಂದ 12ನೇ ತರಗತಿವರೆಗೆ ‘ತ್ರಿ–ಭಾಷಾ’ ನೀತಿ ಅಳವಡಿಸಲು ಪ್ರಸ್ತಾಪಿಸಲಾಗಿದ್ದು, ಈ ಪೈಕಿ,ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯಗೊಳಿಸಲಾಗಿದೆ.

5ನೇ ತರಗತಿವರೆಗೆ ಮಾತೃಭಾಷೆ ಅಥವಾ ಮನೆ ಭಾಷೆ ಅಥವಾ ಸ್ಥಳೀಯ ಭಾಷೆ ಅಥವಾ ಕನ್ನಡದಲ್ಲಿ ಬೋಧನೆಯನ್ನು ಪ್ರಸ್ತಾಪಿಸಲಾಗಿದೆ. ಆ ಮೂಲಕ, ಬೋಧನೆಗೆ ದ್ವಿಭಾಷಾ ನೀತಿಗೆ ಅವಕಾಶ ನೀಡಲಾಗಿದೆ. ಅಂದರೆ, ತರಗತಿಯಲ್ಲಿ ಇಂಗ್ಲಿಷ್ ಮಾತೃ ಭಾಷೆಯ ಮಕ್ಕಳು ಅಥವಾ ಸ್ಥಳೀಯ ಭಾಷೆ ಗೊತ್ತಿಲ್ಲದ ಇತರ ರಾಜ್ಯಗಳ ಮಕ್ಕಳಿದ್ದರೆ, ಮಾತೃಭಾಷೆಯ ಜೊತೆಗೆ, ಮನೆ ಭಾಷೆ, ಸ್ಥಳೀಯ ಭಾಷೆ ಅಥವಾ ಕನ್ನಡದ ಜೊತೆಗೆ ಹೆಚ್ಚುವರಿಯಾಗಿ ಇಂಗ್ಲಿಷ್‌ನಲ್ಲಿಯೂ ಬೋಧಿಸಲು ಅವಕಾಶ ಕಲ್ಪಿಸಲಾಗಿದೆ.

ಇತರ ತರಗತಿಗಳಿಗೆ ಬೋಧನಾ ಮಾಧ್ಯಮ ದ್ವಿ ಭಾಷೆಯಲ್ಲಿ ಇರಲಿದೆ. ಮಾತೃಭಾಷೆಯ ಜೊತೆಗೆ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಶಿಕ್ಷಕರು ಬೋಧಿಸಬಹುದು. ಮಕ್ಕಳು ಈ ಎರಡು ಭಾಷೆಗಳ ಪೈಕಿ, ಯಾವುದರಲ್ಲಿ ಬೇಕಾದರೂ ಪರೀಕ್ಷೆಯನ್ನು ಬರೆಯಬಹುದು ಎಂದು ತಜ್ಞರ ಸಮಿತಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.