ಬೆಂಗಳೂರು: 2025ರ ಜನವರಿ 13 ರಿಂದ ಆರಂಭವಾಗಲಿರುವ ಮಹಾ ಕುಂಭಮೇಳದ ಪ್ರಯುಕ್ತ ಉತ್ತರ ಪ್ರದೇಶದ ಪ್ರಯಾಗ್ರಾಜ್ನ (ಅಲಹಾಬಾದ್) ರೈಲು ನಿಲ್ದಾಣದಲ್ಲಿ ಕನ್ನಡದ ಕಂಪು ಕೇಳಿ ಬರಲಿದೆ.

ಹೌದು, ಕುಂಭಮೇಳಕ್ಕೆ ತೆರಳುವ ಕನ್ನಡಿಗರಿಗೆ ಅನುಕೂಲ ಆಗಲಿ ಎಂದು ಪ್ರಯಾಗ್ರಾಜ್ನ ರೈಲು ನಿಲ್ದಾಣಗಳಲ್ಲಿನ ಎಲ್ಲ ಪ್ರಕಟಣೆಗಳು ಹಿಂದಿ, ಇಂಗ್ಲಿಷ್, ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಮೂಡಿ ಬರಲಿವೆ.

ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ವಿಷಯ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಯಾಗ್ ರಾಜ್ ನಲ್ಲಿ ಕನ್ನಡದ ಕಂಪು! 2025ರ ಜನವರಿ 13 ರಿಂದ ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಪ್ರಯಾಗ್ ರಾಜ್ನಲ್ಲಿ ಕುಂಭಮೇಳ ಆರಂಭವಾಗಲಿದೆ. ಈ ಕುಂಭಮೇಳಕ್ಕೆ ದೇಶದಾದ್ಯಂತ ವಿವಿಧ ಸ್ಥಳಗಳಿಂದ ಭಕ್ತರು ರೈಲುಗಳ ಮೂಲಕ ಆಗಮಿಸುತ್ತಾರೆ. ಈ ವೇಳೆ, ಭಿನ್ನ ಪ್ರಾದೇಶಿಕ ಭಾಷೆ ಮಾತನಾಡುವವರಿಗೆ ತೊಂದರೆಯಾಗಬಾರದು ಎನ್ನುವ ದೃಷ್ಠಿಯಿಂದ, ಕುಂಭಮೇಳದ ವೇಳೆ ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಸೇರಿದಂತೆ 12 ಭಾಷೆಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ದೇಶದ ವಿಶಾಲವಾದ ಭಾಷಾ ವೈವಿಧ್ಯತೆಯ ಜೊತೆಗೂಡಿ ಭಾರತೀಯ ರೈಲ್ವೆಯು ಸಮರ್ಥವಾಗಿ ಸಾಗುತ್ತಿದೆ ಎಂದು ಹೇಳಿದ್ದಾರೆ.
.ವಿಡಿಯೊ: ಜೊಮಾಟೊ ಡೆಲಿವರಿ ಬಾಯ್ ಜಾಕೆಟ್ ಧರಿಸಿದ್ದ ಯುವಕನಿಂದ ಕಳ್ಳತನ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.