ಬೆಂಗಳೂರು: ಕೆಎಸ್ಆರ್ಟಿಸಿ ನೌಕರರು ಆರು ತಿಂಗಳು ಮುಷ್ಕರ, ಪ್ರತಿಭಟನೆಗಳನ್ನು ನಡೆಸದಂತೆ ನಿರ್ಬಂಧ ವಿಧಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಕರ್ನಾಟಕ ಆಗತ್ಯ ಸೇವಾ ನಿರ್ವಾಹಣೆ ಕಾಯ್ದೆ–2013ರ ಅನ್ವಯ ಆದೇಶ ಹೊರಡಿಸಿರುವರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಜ.1ರಿಂದ ಜೂನ್ 30ರವರೆಗೂ ಪ್ರತಿಭಟನೆಗಳನ್ನು ನಡೆಸದಂತೆಸೂಚಿಸಿದೆ.

ರಾಜ್ಯ ಸಾರಿಗೆ ನೌಕರರಿಗೆ ಸಮಾನ ವೇತನ,ವಜಾಗೊಂಡ ನೌಕರರ ಮರುನೇಮಕ, ಪೊಲೀಸ್ ಪ್ರಕರಣ ಹಿಂಪಡೆಯುವುದು, ಅವೈಜ್ಞಾನಿಕ ವೇತನ ಪರಿಷ್ಕರಣಾ ಪದ್ಧತಿ ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರುಬೆಳಗಾವಿಯ ಸುವರ್ಣಸೌಧದ ಮುಂದೆ ಡಿ.19ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
ನಡೆಸುತ್ತಿದ್ದರು.

ಮುಷ್ಕರ ಮುಂದುವರಿದರೆ ಚುನಾವಣೆ ಸಮಯದಲ್ಲಿ ಸರ್ಕಾರಕ್ಕೆ ತಲೆ ಬಿಸಿಯಾಗಬಹುದು ಎಂಬ ಕಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ನೌಕರರು ಹಾಗೂ ನೌಕರರ ವಿವಿಧ ಸಂಘಟನೆಗಳ ಮುಖಂಡರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.