ಬೆಂಗಳೂರು: ಹಿಂದಿನ ವರ್ಷದ ಮಾರ್ಚ್‌ನಲ್ಲಿ ಅನುಮೋದನೆ ಪಡೆದಿದ್ದ ಬಜೆಟ್ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಖರ್ಚು ಮಾಡಿದ, ಮಾಡಬೇಕಾದ ₹11,267 ಕೋಟಿ ಮೊತ್ತ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

ಈ ಸಾಲಿನ ಮೂರನೇ ಪೂರಕ ಅಂದಾಜು ಇದಾಗಿದೆ. ಜಲಸಂಪನ್ಮೂಲ, ಲೋಕೋಪಯೋಗಿ, ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಹೆಚ್ಚಿನ ಮೊತ್ತ ನೀಡಲಾಗಿದೆ.

*ರಾಷ್ಟ್ರೀಯ ಯುವಜನೋತ್ಸವದ ನಿಮಿತ್ತ ಧಾರವಾಡ ಕೃಷಿ ವಿಶ್ವವಿದ್ಯಾಲಯದ ರಸ್ತೆಗಳ ಡಾಂಬರೀಕರಣ ಹಾಗೂ ವ್ಯವಸ್ಥೆ ಕಲ್ಪಿಸಲು ಒಟ್ಟು ₹8.31 ಕೋಟಿ ಮತ್ತು ಜಿಲ್ಲೆ ಮತ್ತು ಇತರೆ ರಸ್ತೆ ಕಾಮಗಾರಿಗಳ ಬಾಕಿ ಬಿಲ್‌ಗಳ ಪಾವತಿಗೆ ₹650 ಕೋಟಿ

*ಕೃಷ್ಣಾ, ಕಾವೇರಿ, ಕರ್ನಾಟಕ, ವಿಶ್ವೇಶ್ವರಯ್ಯ ಸೇರಿ ನಾಲ್ಕು ನಿಗಮಗಳು, ಕೆರೆ ಅಭಿವೃದ್ಧಿ, ಪಶ್ಚಿಮ ವಾಹಿನಿ ಯೋಜನೆ, ಅಣೆಕಟ್ಟು ಪಿಕಪ್ ಒಳಗೊಂಡ ವಿವಿಧ ಕಾಮಗಾರಿಗಳ ಬಾಕಿ ಬಿಲ್‌ಗಳ ಪಾವತಿಗೆ ₹2,500 ಕೋಟಿ

*ರಾಜ್ಯ ಹೆದ್ದಾರಿ ಕಾಮಗಾರಿಗಳ ಬಾಕಿ ಬಿಲ್‌ಗಳ ಪಾವತಿಗೆ ₹850 ಕೋಟಿ

*ದೇವಸ್ಥಾನ, ಟ್ರಸ್ಟ್ ಹಾಗೂ ಮಠಗಳಿಗೆ ವಿಶೇಷ ಅನುದಾನವಾಗಿ ಒಟ್ಟು ₹83.35 ಕೋಟಿ

*ಬೆಳಗಾವಿಯಲ್ಲಿ ಜಗನ್ನಾಥ ಜೋಶಿ ಸ್ಮಾರಕ ಭವನಕ್ಕೆ ₹5 ಕೋಟಿ

*ಬಳ್ಳಾರಿ, ಚಿಕ್ಕಬಳ್ಳಾಪುರ, ಕದಂಬೋತ್ಸವಕ್ಕೆ ತಲಾ ₹2 ಕೋಟಿ, ಲಕ್ಕುಂಡಿ ಉತ್ಸವಕ್ಕೆ ₹1 ಕೋಟಿ. ಬೆಂಗಳೂರಿನಲ್ಲಿ ನಡೆಯಲಿರುವ ಜಿ–20 ಶೃಂಗಸಭೆಗೆ ₹3.12 ಕೋಟಿ

*ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ₹100 ಕೋಟಿ

*ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆವರ್ತ ನಿಧಿಗೆ ₹1000 ಕೋಟಿ

*ಅನಂತಕುಮಾರ್ ಪ್ರತಿಷ್ಠಾನಕ್ಕೆ ₹ 7.5 ಕೋಟಿ

*ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ, ಮಾಹಿತಿ ಮತ್ತು ಸಂವಹನಕ್ಕೆ ₹110ಕೋಟಿ

ಹೆಲಿಕಾಪ್ಟರ್ ಪ್ರಯಾಣಕ್ಕೆ ₹30 ಕೋಟಿ

ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ವಿವಿಧ ಸಚಿವರ ಅಧಿಕೃತ ಪ್ರವಾಸಕ್ಕೆ ಬಾಡಿಗೆ ಆಧಾರದ ಮೇಲೆ ಪಡೆದ ಹೆಲಿಕಾಪ್ಟರ್ ಅಥವಾ ಏರ್ ಕ್ರಾಫ್ಟ್ ಬಿಲ್ ಪಾವತಿಸಲು ₹15 ಕೋಟಿ ಹಾಗೂ ಹೆಚ್ಚುವರಿಯಾಗಿ ₹15 ಕೋಟಿ ಸೇರಿ ₹30 ಕೋಟಿ ಒದಗಿಸಲಾಗಿದೆ.

ಮೂವರು ಸಚಿವರಿಗೆ ಹೊಸ ಕಾರು

ಸಾರಿಗೆ ಸಚಿವ ಶ್ರೀರಾಮುಲು, ವಸತಿ ಸಚಿವ ವಿ. ಸೋಮಣ್ಣ, ಜವಳಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಕೋಲಾರ ಸಂಸದ ಮುನಿಸ್ವಾಮಿ ಅವರಿಗೆ ಹೊಸ ವಾಹನ ಖರೀದಿಸಲು ₹1.39 ಕೋಟಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.