ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಶುಕ್ರವಾರದಿಂದ ಕಾರ್ಗೋ, ಪಾರ್ಸೆಲ್ ಮತ್ತು ಹಗುರ ಪಾರ್ಸೆಲ್ಗಳ ಸೇವೆಗೆ ಚಾಲನೆ ನೀಡಲಿವೆ.

ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವ್ಯವಸ್ಥೆ ಜಾರಿ ಮಾಡುವುದರಿಂದ ಸಾರಿಗೆ ಸಂಸ್ಥೆಗೆ ವಾರ್ಷಿಕ ₹80 ರಿಂದ ₹100 ಕೋಟಿ ಆದಾಯ ಸಿಗಲಿದೆ. ಮೊದಲ ಹಂತದಲ್ಲಿ ರಾಜ್ಯದೊಳಗೆ 88 ಬಸ್ ನಿಲ್ದಾಣಗಳಲ್ಲಿ ಮತ್ತು ಅಂತರರಾಜ್ಯದ 21 ಬಸ್ ನಿಲ್ದಾಣಗಳಲ್ಲಿ 21 ಬಸ್ ನಿಲ್ದಾಣ ಸೇರಿ ಒಟ್ಟು 109 ಬಸ್ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಎರಡನೇ ಹಂತದಲ್ಲಿ ಉಳಿದ ಬಸ್ ನಿಲ್ದಾಣಗಳಲ್ಲೂ ಈ ಯೋಜನೆ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.

ಈಗ ಲಗೇಜ್ ಸಾಗಣೆಯಿಂದ ಮೂರು ಸಾರಿಗೆ ನಿಗಮಗಳು ಪ್ರತಿ ದಿನ ₹8.50 ಲಕ್ಷ ಆದಾಯಗಳಿಸುತ್ತಿದೆ. ಹೊಸ ವ್ಯವಸ್ಥೆ ಜಾರಿ ಆದ ಬಳಿಕ ಲಗೇಜ್ ಆದಾಯ ಎರಡು ಪಟ್ಟು ಹೆಚ್ಚಾಗಲಿದೆ ಎಂದರು.

ಈ ಯೋಜನೆಯ ಜಾರಿಗೆ ‘ಮೆಸ್ಟ್ರಾಟಜಿಕ್ ಔಟ್ ಸೋರ್ಸಿಂಗ್ ಪ್ರೈವೇಟ್ ಲಿಮಿಟೆಡ್’ ಅನ್ನು ಟೆಂಡರ್ ಮೂಲಕ ಐದು ವರ್ಷಗಳ ಅವಧಿಗೆ ನಿರ್ವಹಣಾ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಗಿದೆ. ಅಗತ್ಯ ಮೂಲ ಸೌಕರ್ಯವನ್ನು ಈ ಕಂಪನಿಯವರೇ ಅಳವಡಿಸಿ ನಿರ್ವಹಿಸಲಿದ್ದಾರೆ. ಇವರಿಗೆ ನಿಗಮದ ಬಸ್ ನಿಲ್ದಾಣಗಳಲ್ಲಿ 10x10 ಅಳತೆಯ ಉಚಿತ ಸ್ಥಳಾವಕಾಶ ನೀಡಲಾಗುವುದು ಎಂದರು.

ಈ ಕಂಪನಿಯವರು ಕೌಂಟರ್ ನಿರ್ವಹಿಸಲು ಮಾನವ ಶಕ್ತಿ ನಿಯೋಜನೆ, ಲಗೇಜ್ ಸ್ವೀಕರಿಸುವುದು, ಬಸ್ಸಿಗೆ ಲೋಡಿಂಗ್– ಅನ್ ಲೋಡಿಂಗ್ ಮಾಡುವುದು. ತಲುಪಿದ ಬಸ್ ನಿಲ್ದಾಣದಲ್ಲಿ ಗ್ರಾಹಕರಿಗೆ ಲಗೇಜ್ ವಿಲೇವಾರಿ ಇತ್ಯಾದಿ ಕೆಲಸಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.