ಬೆಂಗಳೂರು: ‘ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪರಿಣಾಮ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಸಾವಿರಾರು ಕೋಟಿ ಬಂಡವಾಳ ಹರಿದು ಬರಲಿದ್ದು, ಉದ್ಯಮಗಳ ಸ್ಥಾಪನೆಯ ಜತೆಗೆ ಅಧಿಕ ಪ್ರಮಾಣದಲ್ಲಿ ಉದ್ಯೋಗವೂ ಸೃಷ್ಟಿ ಆಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ನಿಖರವಾಗಿ ಎಷ್ಟು ಬಂಡವಾಳ ಬರಬಹುದು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ನವೆಂಬರ್ನಲ್ಲಿ ನಡೆಯುವ ವಿಶ್ವ ಹೂಡಿಕೆದಾರರ ಸಮ್ಮೇಳನದಲ್ಲಿ ಅದರ ಮಾಹಿತಿ ಸಿಗುತ್ತದೆ’ ಎಂದು ಅವರು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಜಗತ್ತಿನ ದೊಡ್ಡ ಉದ್ಯಮಿಗಳಾದ ಲಕ್ಷ್ಮೀ ಮಿತ್ತಲ್, ಅರವಿಂದ ಕಿರ್ಲೋಸ್ಕರ್, 2000 ವ್ಯಾಟ್, ಜನರಲ್ ಎಲೆಕ್ಟ್ರಿಕಲ್ಸ್, ಡಾಸೋ, ಸಿಸ್ಟಮ್, ಲಾಕ್ಹೀಡ್ ಮಾರ್ಟೀನ್, ಲೂಲು ಗ್ರೂಪ್, ದಾಲ್ಮಿಯಾ, ನೋವಾ ನಾಸ್ಡಿಕ್, ವೋಲ್ವೊ ಸೇರಿ 40 ಕ್ಕೂ ಹೆಚ್ಚು ಉದ್ಯಮಿಗಳು ಭೇಟಿಯಾದರು. ಇವರಲ್ಲಿ ಬಹುತೇಕರು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದಾರೆ ಎಂದರು.

ಹಲವು ಕಾರಣಗಳಿಂದ ಅಲ್ಲಿಗೆ ಹೋಗಲು ಆರಂಭದಲ್ಲಿ ಹಿಂಜರಿಕೆ ಇತ್ತು. ಅದರಲ್ಲಿ ಭಾಗವಹಿಸಿದ್ದು ಸರಿಯಾದ ತೀರ್ಮಾನವೇ ಆಗಿದೆ. ಅಲ್ಲಿಗೆ ಹೋಗದೇ ಇದ್ದರೆ, ರಾಜ್ಯಕ್ಕೆ ನಷ್ಟ ಆಗುತ್ತಿತ್ತು. ಮುಂದಿನ ದಿನಗಳಲ್ಲಿ ಯುವಕರಿಗೆ, ರೈತರಿಗೆ ಲಾಭವಾಗುವಂತೆ ವಾತಾವರಣ ನಿರ್ಮಿಸುವಲ್ಲಿ ದಾವೋಸ್ ಪ್ರಯಣ ಯಶಸ್ವಿಯಾಗಿದೆ ಎಂದರು.

‘ಮುಂದಿನ ಮೂರು ವರ್ಷಗಳಲ್ಲಿ ರಾಜ್ಯವು ಔದ್ಯೋಗಿಕ ಬೆಳವಣಿಗೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನದಲ್ಲಿರುವಂತೆ ಮಾಡುತ್ತೇನೆ. ಯುವಕರಿಗೆ ಉದ್ಯೋಗ ಮತ್ತು ಕೈಗಾರಿಕೀಕರಣದಿಂದ ರೈತರಿಗೂ ಲಾಭವಾಗುತ್ತದೆ’ ಎಂದು ಹೇಳಿದರು.

ಬಂಡವಾಳ ಹೂಡಿಕೆ ಸಾಧ್ಯತೆ

*ಲುಲೂ ಕಂಪನಿಯಿಂದ ₹2000 ಕೋಟಿ ಬಂಡವಾಳ ಹೂಡಿಕೆ. ತರಕಾರಿ, ಹಣ್ಣು, ಹೂವು ಮತ್ತು ಇತರ ಕೃಷಿ ಉತ್ಪನ್ನಗಳನ್ನು ಗ್ರಾಮೀಣ ಭಾಗದಿಂದ ನಗರಗಳಿಗೆ ಸಾಗಾಣಿಕೆ ಜಾಲ ನಿರ್ಮಾಣ

* ಲಕ್ಷ್ಮೀಮಿತ್ತಲ್ ಅವರಿಂದ ಸೌರ ವಿದ್ಯುತ್ ಸ್ಥಾವರ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ ಭರವಸೆ

* ಬಾಬಾ ಕಲ್ಯಾಣಿ ಗ್ರೂಪ್ನಿಂದ ಕೋಲಾರ ಸಮೀಪದಲ್ಲಿ ಬಾಹ್ಯಾಕಾಶ ಉತ್ಪನ್ನಗಳ ತಯಾರಿಕೆ ಉದ್ಯಮ

* ಜನರಲ್ ಎಲೆಕ್ಟ್ರಿಕಲ್ಸ್ನಿಂದಲೂ ಎಲೆಕ್ಟ್ರಿಕಲ್ಸ್ ಉತ್ಪನ್ನಗಳ ತಯಾರಿಕೆ ಹೂಡಿಕೆಗೆ ಒಪ್ಪಿಗೆ

* ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಒಪ್ಪಂದಕ್ಕೆ ಡಬ್ಲ್ಯೂಇಎಫ್ ವ್ಯವಸ್ಥಾಪಕ ನಿರ್ದೇಶಕ ಮುರತ್ ಸೊನಮೇಜು ಅವರಿಂದ ಸಹಿ

*ಬಹರೇನ್ನ ಎಕನಾಮಿಕ್ ಡೆವಲಪ್ಮೆಂಟ್ ಬೋರ್ಡ್ನೊಂದಿಗೆ ಫಿನ್ ಟೆಕ್, ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಸೆಕ್ಯುರಿಟಿ ವಿಷಯಗಳಲ್ಲಿ ಸಹಯೋಗ ಮತ್ತು ಸಹಕಾರ ಕುರಿತ ಒಪ್ಪಂದಕ್ಕೆ ಸಹಿ

* ನೋವೋ ನೊಸ್ಡೆಕ್ ರಾಜ್ಯ ಮಧುಮೇಹಿ ರೋಗಿಗಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ನಿರ್ವಹಿಸಲು ಒಪ್ಪಿದ್ದಾರೆ. ಸಾವಿರಾರು ಮಧುಮೇಹಿಗಳಿಗೆ ರೋಗ ನಿರ್ವಹಣೆ ಜತೆಗೆ ಕಡಿಮೆ ದರದಲ್ಲಿ ಔಷಧ ವಿತರಿಸಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.