ಬೆಂಗಳೂರು: ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ಬೆಂಗಳೂರು, ಮೈಸೂರು ಮತ್ತು ಮಂಗಳೂರು ಘಟಕಗಳ ಸಹಯೋಗದಲ್ಲಿ ಆಯೋಜಿಸಿರುವ ಕರ್ನಾಟಕ ಸಿಎಂಎ ಸಮ್ಮೇಳನ ಫೆ. 25 ಮತ್ತು 26ರಂದು ಬೆಂಗಳೂರಿನ ಎಫ್ಕೆಸಿಸಿಐ ಕಚೇರಿಯ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಲಿದೆ.

ಈ ಸಮ್ಮೇಳನವು ಫೆ. 25ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆಯಾಗಲಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಮಾಜಿ ಸಂಸದ ಜನಾರ್ದನ ಸ್ವಾಮಿ, ನಿವೃತ್ತ ಐಆರ್ಎಸ್ ಅಧಿಕಾರಿ ಶ್ರೀನಿವಾಸ್ ಬಿದರಿ ಭಾಗವಹಿಸಲಿದ್ದಾರೆ.

ತಂತ್ರಜ್ಞಾನ, ಆರೋಗ್ಯ, ಸ್ಟಾರ್ಟ್ಅಪ್ ವಾತಾವರಣ
ದಲ್ಲಿ ವೃತ್ತಿಪರರ ಪಾತ್ರ, ಆರ್ಥಿಕ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ವಿಷಯಗಳ ಕುರಿತು ಎರಡೂ ದಿನ ಗೋಷ್ಠಿಗಳು ನಡೆಯಲಿವೆ. ಪರಿಣತರಾದ ನರಸಿಂಹನ್ ಇಳಂಗೋವನ್, ಪಿ. ತಿರುವೆಂಕಟಂ, ಅಭಿಷೇಕ್ ರತ್ಕಲ್, ಕಲ್ಮಂಜೆ ಗುರುರಾಜ ಆಚಾರ್ಯ, ಅದ್ವೈತ್ ಕುಲಕರ್ಣಿ, ಶ್ರೀಕಾಂತ್, ಕೆ.ಗೋಪಿನಾಥ್, ಮೋಹನ್ ಕುಮಾರ್ ಬಿ.ಎನ್, ರೂಪಾ ಡಿ, ವೆಂಕಟರಾಮನ್ ಅವರು ಗೋಷ್ಠಿಗಳಲ್ಲಿ ವಿಷಯಗಳನ್ನು ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.