ಬೆಂಗಳೂರು: ನಾಯಕನಿಲ್ಲದ ಬಿಜೆಪಿ, ನಾವಿಕನಿಲ್ಲದ ಹಡಗು ಎರಡೂ ಒಂದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಕುಹಕವಾಡಿದೆ.

ಈ ಬಗ್ಗೆ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, ‘ನಾಯಕನಿಲ್ಲದ ಬಿಜೆಪಿ ನಾವಿಕನಿಲ್ಲದ ಹಡಗು ಎರಡೂ ಒಂದೇ, ಎರಡೂ ಮುಳುಗುತ್ತವೆ’ ಎಂದು ತಮಾಷೆ ಮಾಡಿದೆ.

‘ಹಳೆ ಅಧ್ಯಕ್ಷ ಭೂಗತರಾಗಿದ್ದಾರೆ. ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿಲ್ಲ. ಒಟ್ಟಿನಲ್ಲಿ ಕರ್ನಾಟಕ ಬಿಜೆಪಿ ಪಕ್ಷ ಹೇಳೋರು ಕೇಳೋರು ಇಲ್ಲದ ಅನಾಥಾಲಯದಂತಾಗಿದೆ’ ಎಂದು ಹೇಳಿದೆ.

‘ಪಕ್ಷದ ಸದಸ್ಯರೇ ಅಲ್ಲದವರನ್ನು ಉಚ್ಚಾಟಿಸಿದ ಏಕೈಕ ಪಕ್ಷ ಬಿಜೆಪಿ, ಇಂತಹ ಕಾಮಿಡಿಗಳು ಬಿಜೆಪಿಯಲ್ಲಿ ಮಾತ್ರ ನೋಡಲು ಸಿಗುತ್ತದೆ’ ಎಂದು ವ್ಯಂಗ್ಯವಾಡಿದೆ.

ದಾವಣಗೆರೆಯಲ್ಲಿ ಪಕ್ಷದ ಸದಸ್ಯರಲ್ಲದವರನ್ನು ಉಚ್ಚಾಟನೆ ಮಾಡಿರುವ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಈ ರೀತಿ ಹೇಳಿದೆ.

‘ಲಿಂಗಾಯತ ನಾಯಕರನ್ನು ಹಾಗೂ ಬಿಎಸ್ ಯಡಿಯೂರಪ್ಪ ಬೆಂಬಲಿಗರನ್ನು ಹುಡುಕಿ ಹುಡುಕಿ ಹೊಸಕಿ ಹಾಕಲಾಗುತ್ತಿದೆ ಎಂಬುದಕ್ಕೆ ದಾವಣಗೆರೆಯ ಈ ಉಚ್ಚಾಟನೆ ಪ್ರಹಸನವೇ ಸಾಕ್ಷಿ’ ಎಂದು ಬರೆದುಕೊಂಡಿದೆ.

‘ಪಕ್ಷದ ಅಧಿಕೃತ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರೂ ಉಚ್ಚಾಟನೆ ಶಿಕ್ಷೆ ನೀಡಲಾಗುತ್ತಿದೆ ಎಂದರೆ ಯಡಿಯೂರಪ್ಪ ಕೂಟದ ಮುಂದೆ ಸಂತೋಷ ಕೂಟ ಮೇಲುಗೈ ಸಾಧಿಸುತ್ತಿದೆ ಎಂದರ್ಥವಲ್ಲವೇ ಎಂದು ಪ್ರಶ್ನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.