ಬೆಂಗಳೂರು: ಏಳು ಜನ ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಕಪಿಲ್ ಮೋಹನ್‌ಗೆ ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹಾಗೂ ಎಸ್. ಸೆಲ್ವಕುಮಾರ್‌ಗೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.

ಕಪಿಲ್ ಮೋಹನ್ ಅವರು ಈ ಹಿಂದೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜವಾಬ್ದಾರಿ ಹೊಂದಿದ್ದರು. ಸೆಲ್ವಕುಮಾರ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಜವಾಬ್ದಾರಿ ಜತೆಗೆ ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಹೆಚ್ಚುವರಿ ಹೊಣೆ ಹೊಂದಿದ್ದರು. ಹೆಚ್ಚುವರಿ ಹೊಣೆಯನ್ನು ಮುಂದುವರಿಸಲಾಗಿದೆ.

ಎಸ್.ಆರ್. ಉಮಾಶಂಕರ್– ಪ್ರಧಾನ ಕಾರ್ಯದರ್ಶಿ,ಸಹಕಾರ ಇಲಾಖೆ. ವಿ. ಪೊನ್ನುರಾಜ್–ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ. ಆರ್. ಗಿರೀಶ್–ಸಿಇಒ, ಕರ್ನಾಟಕ ಕೈಗಾರಿಕಾ ಪ್ರದೇಶಾ ಭಿವೃದ್ಧಿ ಮಂಡಳಿ. ಎನ್. ಶಿವಶಂಕರ್–ನಿರ್ದೇಶಕ, ಪೌರಾಡಳಿತ ನಿರ್ದೇಶನಾಲಯ. ಎಂ.ಎಸ್. ಅರ್ಚನಾ–ಜಿಲ್ಲಾಧಿಕಾರಿ,ಹಾಸನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.