ಬೆಂಗಳೂರು: ‘ತಾಕತ್ತು, ದಮ್ಮು ಬಗ್ಗೆ ಯಾರಾದರೂ ಹೆಣ್ಣು ಮಕ್ಕಳು ಮಾತನಾಡುತ್ತಾರೆಯೇ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ‘ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳು ಮಾತನಾಡುವ ಭಾಷೆ ಇದಲ್ಲ’ ಎಂದರು.

ಬೆಳಗಾವಿಯಲ್ಲಿ ಭಾನುವಾರ ಮಾತನಾಡಿದ್ದ ಶೋಭಾ ಕರಂದ್ಲಾಜೆ, ‘ತಾಕತ್ತಿದ್ರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ’ ಎಂದು ಬೈರತಿ ಸುರೇಶ್ಗೆ ಸವಾಲು ಹಾಕಿದ್ದರು.

‘ಸುಸಂಸ್ಕೃತ ಹೆಣ್ಣು ಮಕ್ಕಳು ಎಂದರೆ ಕ್ಷಮೆಯಾಧರಿತ್ರಿ, ಭಾರತಾಂಬೆ ಎಂದು ಗೌರವ ಕೊಡುತ್ತೇವೆ. ಆಯಮ್ಮನ ಬಾಯಲ್ಲಿ ಬರುವ ಮಾತಾ ಇದು?’ ಎಂದು ಸುರೇಶ್ ವಾಗ್ದಾಳಿ ನಡೆಸಿದರು.

‘ಅವರ (ಶೋಭಾ) ವಿರುದ್ಧದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ’ ಎಂದೂ ಸುರೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.