ಬೆಂಗಳೂರು:ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆಯಡಿ ಮಂಗನಕಾಯಿಲೆಗೆ (ಕೆಎಫ್ಡಿ) ತುತ್ತಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಚಿಕಿತ್ಸಾ ಪ್ಯಾಕೇಜ್ ಅಂತಿಮಗೊಳಿಸಲಾಗಿದೆ.

ಆಯುಷ್ಮಾನ್ ಅಥವಾ ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳು ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಂಗನಕಾಯಿಲೆಗೆ ಚಿಕಿತ್ಸೆ ಪಡೆಯಬಹುದು. ಅದರ ಮೊತ್ತವನ್ನು ಈ ಯೋಜನೆಯಡಿ ಭರಿಸಲಾಗುತ್ತದೆ. ಆದರೆ, ಈ ಯೋಜನೆಗೆ ಅನ್ವಯಿಸುವ ಷರತ್ತುಗಳು ಮಂಗನಕಾಯಿಲೆವೂ ಅನ್ವಯವಾಗುತ್ತವೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಕಾರ್ಯಕಾರಿ ನಿರ್ದೇಶಕರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ಕೆಎಫ್ಡಿ ಶಂಕಿತ ವ್ಯಕ್ತಿಗೆ ದಿನಕ್ಕೆ ವಾರ್ಡ್ ಶುಲ್ಕ ಸಹಿತ ಚಿಕಿತ್ಸೆಗೆ ₹ 1,800, ಸಂಕೀರ್ಣವಲ್ಲದ ಪ್ರಕರಣದಲ್ಲಿ ದಿನಕ್ಕೆ ವಾರ್ಡ್ ಶುಲ್ಕ ಸಹಿತ ಚಿಕಿತ್ಸೆಗೆ ₹ 2,700, ಪ್ರಯೋಗಾಲಯ ಪರಿಕ್ಷೆಗೆ ಗರಿಷ್ಠ ₹2,000, ಸಂಕೀರ್ಣ ಪ್ರಕರಣಗಳಲ್ಲಿ ತೀವ್ರ ನಿಗಾ ಘಟಕ ಶುಲ್ಕ ಸಹಿತ ದಿನಕ್ಕೆ ₹ 4,500, ಹೆಚ್ಚುವರಿ ಔಷಧಿ ಬಳಕೆಗೆ ₹ 2,000 ಹಾಗೂ ಉನ್ನತ ಮಟ್ಟದ ವಿಕಿರಣಶಾಸ್ತ್ರದ ತನಿಖೆಗೆ ₹ 500 ನಿಗದಿಪಡಿಸಲಾಗಿದೆ.

ಮಂಗನಿಂದ ಹರಡುವ ಈ ಕಾಯಿಲೆಯು ಆರು ದಶಕಗಳಿಂದ ಕಾಡುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ಗ ಈ ಕಾಯಿಲೆ ಈಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೂ ವಿಸ್ತರಿಸಿದೆ. ಈ ಸಂಬಂಧ ವೈರಾಣು ಪರೀಕ್ಷೆ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ, ಹೆಚ್ಚುವರಿ ಔಷಧಿ ಬಳಕೆ ಹಾಗೂ ಚಿಕಿತ್ಸೆಗೆ ದರ ನಿಗದಿ ಮಾಡಲಾಗಿದೆ.

ಆಸ್ಪತ್ರೆ ಆಯ್ಕೆಗೆ ಅವಕಾಶ

ಈ ಪ್ಯಾಕೇಜ್ಗಳನ್ನು ತುರ್ತು ಸಂದರ್ಭದ ಚಿಕಿತ್ಸಾ ಪ್ಯಾಕೇಜ್ಗಳೆಂದು ಗುರುತಿಸಿರುವ ಕಾರಣ ನೇರವಾಗಿ ಸಾರ್ವಜನಿಕ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು. ಚಿಕಿತ್ಸೆಗೆ ಹೆಚ್ಚುವರಿ ಔಷಧಿಗಳಲ್ಲಿ ಬಳಸಿದಲ್ಲಿ ಪೂರಕ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.