ಬೆಂಗಳೂರು: ಮಧುಮೇಹ ಮತ್ತು ಆಹಾರ ಕಾಳಜಿ ಉಳ್ಳವರ ಅನುಕೂಲಕ್ಕಾಗಿ ಹೊಸದಾಗಿ ಸಕ್ಕರೆ ರಹಿತ ಉತ್ಪನ್ನಗಳನ್ನು ಕೆಎಂಎಫ್ ಬಿಡುಗಡೆ ಮಾಡಿದೆ.

ಸಕ್ಕರೆ ರಹಿತ ಪೇಡ, ಸಕ್ಕರೆ ರಹಿತ ಕೇಸರಿ ಪೇಡ, ಸಕ್ಕರೆ ರಹಿತ ಬೇಸನ್ ಲಾಡು, ಸಕ್ಕರೆ ರಹಿತ ಕೊಕೊನಟ್ ಬರ್ಫಿ, ಸಕ್ಕರೆ ರಹಿತ ಚಾಕೋಲೇಟ್ ಬರ್ಫಿಯನ್ನು ಬಿಡುಗಡೆ ಮಾಡಲಾಯಿತು. ಈ ಹೊಸ ಉತ್ಪನ್ನಗಳನ್ನು ಶೇ 10ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗವುದು ಎಂದು ಕೆಎಂಎಫ್ ತಿಳಿಸಿದೆ.

ನೈಸರ್ಗಿಕ ಹಾಗೂ ಆಯುರ್ವೇದಿಕ್ ಗುಣವುಳ್ಳ ನಂದಿನಿ ಐಸ್ಕ್ರೀಮ್ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಸ್ಟ್ರಾಬೆರಿ, ಸೀಬೆ, ಏಲಕ್ಕಿ, ಅನಾನಸ್ ಮತ್ತು ಮಾವು ಸ್ವಾದದ 5 ವಿವಿಧ ಶ್ರೀಖಂಡ್ಗಳು ಲಭ್ಯ ಇವೆ. ಶ್ರೀಖಂಡ್ ಅನ್ನು ನೇರವಾಗಿ ಅಥವಾ ಚಪಾತಿ, ಪೂರಿ ರೀತಿಯ ಉಪಾಹಾರಗಳ ಜೊತೆಯೂ ಸವಿಯಬಹುದು ಎಂದು ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ವಿವರಿಸಿದರು.

ಇದೇ ವೇಳೆ ನಂದಿನಿ ಸಿಹಿ ಉತ್ಸವಕ್ಕೂ ಚಾಲನೆ ನೀಡಿದ ಅವರು, ‘ಉತ್ಸವದಿಂದ ಉತ್ಪನ್ನಗಳ ಮಾರಾಟ ಪ್ರಮಾಣ ಶೇ 16ರಷ್ಟು ಅಧಿಕವಾಗುತ್ತಿದೆ. ಉತ್ಸವದಲ್ಲಿ ಎಲ್ಲ ಉತ್ಪನ್ನಗಳ ಮಾರಾಟ ದರದಲ್ಲಿ ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.