ಸಂಗೊಳ್ಳಿ (ಬೆಳಗಾವಿ ಜಿಲ್ಲೆ): 'ದೇಶಭಕ್ತಿ, ರಾಷ್ಟ್ರಪ್ರೇಮದ ಬಗ್ಗೆ ಕೆಲವರು ಬರೀ ಬಾಯಿ ಬಡಿದುಕೊಳ್ಳುತ್ತಾರೆ. ದೇಶಪ್ರೇಮ ಎನ್ನುವುದು ಬರೀ ಭಾಷಣದ ಸರಕಲ್ಲ. ನಿಮ್ಮಂಥವರು ಸಂಗೊಳ್ಳಿ ರಾಯಣ್ಣನ ನೋಡಿ ಕಲಿಯಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದರು.

ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಮುದಾಯ ಭವನ, ಭೋಜನಾಲಯ ಹಾಗೂ ಶಿಲ್ಪವನಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

'ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಸುರಪುರದ ವೆಂಕಟಪ್ಪ ನಾಯಕ ಮುಂತಾದವರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಮೊದಲೇ ಬ್ರಿಟಿಷರೊಂದಿಗೆ ಹೋರಾಡಿದವರು. ಈಗ ದೇಶಪ್ರೇಮದ ಬಗ್ಗೆ ದೊಡ್ಡ ದೊಡ್ಡ ಮಾತನಾಡುವವರೆಲ್ಲ ಆಗ ಎಲ್ಲಿದ್ದರು?' ಎಂದೂ ಪ್ರಶ್ನಿಸಿದರು.

'ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಡಿದ್ದು ಕಾಂಗ್ರೆಸ್ಸಿನವರು. ದೇಶದ ಇತಿಹಾಸವನ್ನು ಸರಿಯಾಗಿ ಓದಿಕೊಳ್ಳಿ. ಇತಿಹಾಸ ಅರಿಯದವ ಭವಿಷ್ಯ ನಿರ್ಮಿಸಲು ಸಾಧ್ಯವಿಲ್ಲ ಎಂಬ ಅಂಬೇಡ್ಕರ್ ಮಾತು ಅರ್ಥ ಮಾಡಿಕೊಳ್ಳಿ' ಎಂದೂ ಹೇಳಿದರು.

'ಪ್ರತಿಯೊಬ್ಬರೂ ರಾಯಣ್ಣನಂತೆ ತಾಯ್ನಾಡು ಪ್ರೀತಿಸಬೇಕು. ನಮ್ಮ ನಾಡನ್ನು ದೇಶವನ್ನು ನಾವಲ್ಲದೇ ಇನ್ಯಾರು ಪ್ರೀತಿಸುತ್ತಾರೆ. ಇತಿಹಾಸವನ್ನು ಅರ್ಥ ಮಾಡಿಕೊಂಡು ನಿಜವಾದ ದೇಶಪ್ರಮ ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಸೈನಿಕ ಶಾಲೆಗಳು ದಾರಿ ತೋರಿಸಲಿವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.