ರೋಣ: ತಾಲ್ಲೂಕಿನ ಅಸೂಟಿ ಗ್ರಾಮದ ಮುಸ್ಲಿಂ ಧರ್ಮದ ಯುವ ದಿವಾನ್ ಶರೀಫ್ ರವರಿಗೆ ಅದೇ ಗ್ರಾಮದ ಖಜೂರಿ ಶ್ರೀಮಠದ ಮುರುಘರಾಜೇಂದ್ರ ಕೋರಣೇಶ್ವರ ಶ್ರೀಗಳೂ ಲಿಂಗದೀಕ್ಷೆ ನೀಡಿದ್ದಾರೆ.

ಈಗಾಗಲೇ ದಿವಾನ್ ಶರೀಫ್ ಅವರಿಗೆ ಲಿಂಗಧೀಕ್ಷೆ ನೀಡಿದ್ದು, ಮುಂದಿನ ದಿನಗಳಲ್ಲಿ ಅಸೂಟಿ ಗ್ರಾಮದ ಖಜೂರಿ ಶ್ರೀಮಠ ಹಾಗೂ ಶಾಂತಿಧಾಮಕ್ಕೆ ಮುಸ್ಲಿಂ ಯುವ ದಿವಾನ್ ಶರೀಫರನ್ನು ಪೀಠಾಪತಿ ಮಾಡುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ನಮ್ಮದು ಬಸವ ತತ್ವ, ನಮ್ಮಲ್ಲಿ ಎಲ್ಲ ಧರ್ಮದವರಿಗೂ ಮುಕ್ತ ಅವಕಾಶವಿದೆ. 12ನೇ ಶತಮಾನದಲ್ಲಿ ಬಸವೇಶ್ವರರು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ಸಾಗುತ್ತಾ ಬಂದಿದ್ದು, ಶರೀಫ್ ನಮ್ಮ ಅಸೂಟಿ ಶ್ರೀಮಠದ ಪೀಠಾಪತಿ ಆಗುತ್ತಿರುವುದು ಅದಕ್ಕೆ ಸಾಕ್ಷಿಯಾಗಿದೆ‘ ಎಂದು ಖಜೂರಿಮಠದ ಮುರುಘರಾಜೇಂದ್ರ ಕೋರಣೇಶ್ವರ ಶ್ರೀಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.