ಬೆಂಗಳೂರು:ರಾಜ್ಯದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿರುವ 2.67 ಕೋಟಿ ಮತದಾರರು 237 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತದಾನ ಪ್ರಕ್ರಿಯೆಏಪ್ರಿಲ್ 23ರಂದು (ಮಂಗಳವಾರ) ನಡೆದಿದೆ. ಸಂಜೆ6ರವರೆಗೂ ಶೇ 67.64ರಷ್ಟು ಮತದಾನ ದಾಖಲಾಗಿದೆ.

ರಾಜ್ಯದ ಬಿರುಬಿಸಿಲಿನ ಭಾಗದಲ್ಲಿರುವ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಗುಲಬರ್ಗಾ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಶಿವಮೊಗ್ಗದಲ್ಲಿಗರಿಷ್ಠ ಶೇ. 76.45 ಮತದಾನ ದಾಖಲಾಗಿದೆ. ತೀವ್ರ ಕುತೂಹಲ ಕೆರಳಿಸಿರುವ ಗುಲ್ಬರ್ಗದಲ್ಲಿ ಕೇವಲ ಶೇ. 57.63 ರಷ್ಟು ಮತದಾನವಾಗಿದೆ.

ಕರ್ನಾಟಕದ 14 ಕ್ಷೇತ್ರಗಳೂ ಸೇರಿದಂತೆ 14 ರಾಜ್ಯಗಳಲ್ಲಿ ಜನರು ಮತ ಚಲಾಯಿಸುತ್ತಿದ್ದಾರೆ. ಈವರೆಗೂ ಒಟ್ಟು ಶೇ 65.61ರಷ್ಟು ಮತದಾನ ದಾಖಲಾಗಿದೆ. ಇದರ ಜೊತೆಗೆ ಒಡಿಶಾದ 42 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆದಿದೆ. ಗೋವಾದ ಮೂರು ಹಾಗೂ ಗುಜರಾತಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ದಾಖಲಾಗಿರುವ ಮತದಾನ(ಸಂಜೆ 6ರವರೆಗೂ)

ಬೆಳಗಾವಿ– ಶೇ 66.59

ಚಿಕ್ಕೋಡಿ– ಶೇ 74.09

ಬಾಗಲಕೋಟೆ– ಶೇ 69.40

ವಿಜಯಪುರ– ಶೇ 60.28

ಗುಲಬರ್ಗಾ– ಶೇ 57.63

ರಾಯಚೂರು– ಶೇ 57.85

ಬೀದರ್– ಶೇ 62.00

ಕೊಪ್ಪಳ– ಶೇ 68.43

ಬಳ್ಳಾರಿ– ಶೇ 66.07

ಹಾವೇರಿ– ಶೇ 71.23

ಧಾರವಾಡ– ಶೇ 70.04

ಉತ್ತರ ಕನ್ನಡ– ಶೇ 74.07

ದಾವಣಗೆರೆ– ಶೇ 72.57

ಶಿವಮೊಗ್ಗ– ಶೇ 76.45

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.