ವಿಜಯಪುರ: ‘ಪೇಜಾವರಶ್ರೀಗಳು ಬೇಕಾದರೆ ಸಾಣೇಹಳ್ಳಿ ಮಠಕ್ಕೆ ಚರ್ಚೆಗೆ ಬರಲಿ’ ಎಂದು ಶುಕ್ರವಾರ ಹೇಳಿಕೆ ನೀಡಿದ್ದ ಶಾಸಕ ಎಂ.ಬಿ.ಪಾಟೀಲ ಅವರು ಶನಿವಾರ ತಮ್ಮ ನಿಲುವು ಬದಲಿಸಿ, ‘ತಟಸ್ಥ ಸ್ಥಳದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ’ ಎಂದಿದ್ದಾರೆ.

‘ಎಸ್.ಎಂ.ಜಾಮದಾರ, ನಾನು ಸೇರಿದಂತೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಗಾರರು ಇದರಲ್ಲಿ ಪಾಲ್ಗೊಳ್ಳುತ್ತೇವೆ. ಸ್ವಾಮೀಜಿ ಮುಂದೆ ನಮ್ಮ ವಾದ ಇಡುತ್ತೇವೆ. ಅಷ್ಟೇ ಅಲ್ಲ, ಅವರನ್ನೂ ಬಸವ ಧರ್ಮದ ಕಡೆಗೆ ಒಲಿಸಿಕೊಳ್ಳುತ್ತೇವೆ’ ಎಂದು ಕುಟುಕಿದರು.

‘ಲಿಂಗಾಯತ ಧರ್ಮವು ಅನುಭವ ಮಂಟಪದ ಪರಿಕಲ್ಪನೆಯಲ್ಲಿ ಸ್ಥಾಪಿತವಾದ ಜಾತಿ ರಹಿತ ಧರ್ಮ. ಸಮಾಜದಲ್ಲಿನ ಅನಿಷ್ಠ ಪದ್ಧತಿ, ಅಸಮಾನತೆ, ಮೇಲು ಕೀಳು ಭಾವನೆ ಹೋಗಲಾಡಿಸಲು ಬಸವಣ್ಣ ಹಾಗೂ ಬಸವಾದಿ ಶರಣರು ಈ ಧರ್ಮವನ್ನು ಹುಟ್ಟು ಹಾಕಿದ್ದಾರೆ’ ಎಂದರು.

‘ಹಿಂದೂ ಧರ್ಮ ಅಲ್ಲ, ಅದು ಸನ್ಮಾರ್ಗ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳಿದ್ದಾರೆ. ಆ ಅರ್ಥದಲ್ಲಿ ನಾವೂ ಕೂಡ ಹಿಂದೂಗಳೇ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.