ಬೆಂಗಳೂರು: ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಪತ್ರಕರ್ತರ ವೈಯಕ್ತಿಕ ಅಭಿಪ್ರಾಯ ಹೇರಲು ಅವಕಾಶ ಇರಬಾರದು. ಆಗ ಮಾತ್ರ ನಿಷ್ಪಕ್ಷಪಾತ ಸುದ್ದಿ ಪ್ರಕಟಿಸಲು ಸಾಧ್ಯ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಭಾನುವಾರ 'ನವ ಭಾರತದಲ್ಲಿ ಮಾಧ್ಯಮಗಳ ಪಾತ್ರ' ಕುರಿತು ಮಾತನಾಡಿದ ಅವರು, 'ಸುದ್ದಿ ಸಂಪೂರ್ಣವಾಗಿ ವೈಯಕ್ತಿಕ ಅಭಿಪ್ರಾಯಗಳಿಂದ ಮುಕ್ತವಾಗಿ ಇರಬೇಕು. ಅಭಿಪ್ರಾಯಗಳು ಅಂಕಣ ಮತ್ತು ಸಂಪಾದಕೀಯಕ್ಕೆ ಸೀಮಿತವಾಗಿರಲಿ. ಸುದ್ದಿಯಲ್ಲಿ ಪತ್ರಕರ್ತರ ಅಭಿಪ್ರಾಯ ಹೇರುವುದು ಜನರನ್ನು ಗೊಂದಲಕ್ಕೆ ತಳ್ಳಲು ಕಾರಣವಾಗುತ್ತದೆ' ಎಂದರು.

ಮಾಧ್ಯಮಗಳಲ್ಲಿನ ಸುದ್ದಿ ಸತ್ಯಕ್ಕೆ ಹತ್ತಿರವಾಗಿ ಇರಬೇಕು. ಯಾವತ್ತೂ ಪ್ರಚೋದನಕಾರಿ ಸ್ವರೂಪದಲ್ಲಿ ಸುದ್ದಿ ಪ್ರಕಟಿಸಬಾರದು. ಈಗ ರಾಜಕೀಯ ಪಕ್ಷಗಳೂ ಮಾಧ್ಯಮ ಸಂಸ್ಥೆಗಳನ್ನು ನಡೆಸುತ್ತಿವೆ. ಇನ್ನು ಸ್ವತಂತ್ರ ಮಾಧ್ಯಮ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಾಮಾಜಿಕ ಮಾಧ್ಯಮಗಳು ದೇಶದಲ್ಲಿ ದ್ವೇಷ ಬಿತ್ತಿ, ಜನರ ನಡುವೆ ಒಡಕು ಮೂಡಿಸುತ್ತಿವೆ. ಅವುಗಳ ಮೇಲೆ ನಿಯಂತ್ರಣ ಇಲ್ಲ. ನಿಗಾ ಇಡುವ ವ್ಯವಸ್ಥೆಯೂ ಸರಿಯಾಗಿಲ್ಲ. ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವುದು ಅಗತ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.