ಬೆಂಗಳೂರು: ‘ಮಾದಾರ ಚೆನ್ನಯ್ಯ ಸ್ವಾಮೀಜಿ ಯಾವತ್ತೂ ಕೂಡ ರಾಜಕೀಯಕ್ಕೆ ಬರುತ್ತೇನೆ, ತಮಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ’ ಎಂದು ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

‘ಸ್ವಾಮೀಜಿಯವರು ಧರ್ಮದ ಕೆಲಸ ಮಾಡಿಕೊಂಡು, ಮಠದ ಅಭಿವೃದ್ಧಿ ಮಾಡಿಕೊಂಡು ಭಕ್ತರ ಬೇಕು ಬೇಡಗಳಿಗೆ ಸ್ಪಂದಿಸಿ ಕೆಲಸ ಮಾಡುವ ಇಚ್ಛೆಯಲ್ಲಿದ್ದಾರೆ. ಆದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎನ್ನುವ ಚಿಂತನೆ ಇತ್ತು ಎನ್ನುವ ವಿಚಾರವೇ ಅಪ್ರಸ್ತುತ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ ಚುನಾವಣೆಗೆ ಸ್ಪರ್ಧಿಸಲು ಒಲವು ತೋರದ ಕಾರಣ ನನಗೆ ಟಿಕೆಟ್ ಸಿಕ್ಕಿದೆ ಎನ್ನುವ ಮಾತು ಸರಿಯಲ್ಲ. ಆರಂಭದಲ್ಲಿ ನನ್ನ ಹೆಸರು ಇರಲಿಲ್ಲ ಎನ್ನುವುದು ನಿಜ. ಹಾಲಿ ಸಂಸದರು ನಿರಾಸಕ್ತಿ ತೋರಿದ್ದರಿಂದ ವರಿಷ್ಠರು ನನ್ನನ್ನು ಕಣಕ್ಕೆ ಇಳಿಸಿದ್ದಾರೆ. ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ’ ಎಂದು ಅವರು ಹೇಳಿದರು.

‘ಹಾಲಿ ಸಂಸದ ನಾರಾಯಣಸ್ವಾಮಿ ಅವರು ರಾಷ್ಟ್ರ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಆದ್ದರಿಂದ, ಅವರು ಸ್ಪರ್ಧೆ ಮಾಡುವುದಿಲ್ಲ. ಚಿತ್ರದುರ್ಗ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಮತ್ತು ಪದಾಧಿಕಾರಿಗಳು ಗೋವಿಂದ ಕಾರಜೋಳ ಅನುಭವಸ್ಥರು, 30 ವರ್ಷಗಳಿಂದ ಅವರನ್ನು ನೋಡಿದ್ದೇವೆ. ಅವರು ಸ್ಪರ್ಧಿಸುವುದು ಒಳಿತು ಎಂದು ನನ್ನ ಹೆಸರು ಶಿಫಾರಸು ಮಾಡಿದರು. ಪಕ್ಷದ ವರಿಷ್ಠರೂ ಅದಕ್ಕೆ ಸಹಮತ ನೀಡಿ ಚಿತ್ರದುರ್ಗದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ’ ಎಂದರು.

‘ಪಕ್ಷದಲ್ಲಿ ಸಾಕಷ್ಟು ಯುವಕರಿದ್ದಾರೆ. ಅವರು ಚುನಾವಣೆಯಲ್ಲಿ ನಿಲ್ಲಬೇಕು. ಟಿಕೆಟ್ ಕೊಡಿ ಎಂದು ಅವರು ಕೇಳಿದ್ದರಲ್ಲಿ ತಪ್ಪೇನಿಲ್ಲ. ಸಾಕಷ್ಟು ಸಮಯ ಕೆಲಸ ಮಾಡಿದವರೂ ಟಿಕೆಟ್ ಸಿಗಬೇಕು ಎಂದು ಕೇಳುತ್ತಾರೆ. ಪಕ್ಷದ ವರಿಷ್ಠರು ತೀರ್ಮಾನ ಮಾಡಿದ ನಂತರ ಎಲ್ಲರೂ ಒಟ್ಟಾಗಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡಲಿದ್ದಾರೆ. ಖಂಡಿತವಾಗಿ ನನ್ನ ಗೆಲುವಿಗೆ ಅವರೆಲ್ಲರೂ ಸಹಕರಿಸಿ ಕೆಲಸ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ’ ಎಂದು ಕಾರಜೋಳ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.