ಬೆಂಗಳೂರು: ಪ್ರಜಾವಾಣಿ ಇಂದು (ಸೋಮವಾರ) ಆಯೋಜಿಸಿರುವ ಫೋನ್–ಇನ್ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರು ಭಾಗವಹಿಸಿದ್ದಾರೆ.

ಮಧ್ಯಾಹ್ನ 1ರ ವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಪ್ರಜಾವಾಣಿಯ ಫೇಸ್ಬುಕ್ ಪುಟದಲ್ಲಿ ನೇರಪ್ರಸಾರವಾಗುತ್ತಿದೆ.

ಯುವನಿಧಿ ನೋಂದಣಿಗೆ ಸಮಸ್ಯೆಯಾಗಿದೆಯೇ?, ಯುವನಿಧಿ ಪಡೆಯಲು ಅರ್ಹತೆಯೇನು?, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತೊಂದರೆ ಇದೆಯೇ?, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆಗಬೇಕಾದುದೇನು?, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುತ್ತಿಲ್ಲವೇ? ಈ ರೀತಿಯ ಇನ್ನಷ್ಟು ಪ್ರಶ್ನೆಗಳು ನಿಮ್ಮಲ್ಲಿದ್ದರೆ, 080–45557230 ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಸಚಿವರೊಂದಿಗೆ ಮಾತನಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.