ಚಾಮರಾಜನಗರ: ತಾಲ್ಲೂಕಿನ ಬಿಸಲವಾಡಿ ಗ್ರಾಮದ ಬಿಳಿಕಲ್ಲು ಕ್ವಾರಿಯೊಂದರಲ್ಲಿ ಸೋಮವಾರ ಕಲ್ಲು ಕುಸಿದು ಕಾಗಲವಾಡಿ ಮೋಳೆಯ ಕಾರ್ಮಿಕರಾದ ಕುಮಾರ್ (28), ಶಿವರಾಜು (35) ಮತ್ತು ಸಿದ್ದರಾಜು (27) ಎಂಬವರು ಮೃತಪಟ್ಟಿದ್ದಾರೆ. ‘ಗಣಿಯಲ್ಲಿ 12 ಕಾರ್ಮಿಕರು ಕೆಲಸ ಮಾಡುತ್ತಿದ್ದರು’ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದೇ ವರ್ಷ ಮಾರ್ಚ್ 4ರಂದು ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿಯಲ್ಲಿ ಬಿಳಿಕಲ್ಲು ಕ್ವಾರಿ ಗುಡ್ಡ ಕುಸಿದು ಮೂವರು ಮೃತಪಟ್ಟಿದ್ದರು. ಆ ಕಹಿನೆನಪು ಹಸಿಯಾಗಿರುವಾಗಲೇ ಮತ್ತೊಂದು ಅವಘಢ ಸಂಭವಿಸಿದೆ.

ಬಿಸಲವಾಡಿಯ ಸರ್ವೆ ನಂಬರ್ 172ರಲ್ಲಿರುವ ಕ್ವಾರಿಯನ್ನು ರೇಣುಕಾದೇವಿ ಎಂಬುವವರು ನಡೆಸುತ್ತಿದ್ದಾರೆ. ಒಟ್ಟು 3 ಎಕರೆಯಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದಿದ್ದಾರೆ. ಕ್ವಾರಿಯು 250 ಅಡಿಗೂ ಹೆಚ್ಚು ಆಳವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.