ಮೈಸೂರು: ‘ಜಾಗತೀಕರಣವು ಸಮಾಜದಲ್ಲಿನ ಜಾತಿ ಅಸಮಾನತೆ ನೀಗಿಸಿ ಎಲ್ಲರ ಅಭಿವೃದ್ಧಿಗೆ ಕಾರಣ ವಾಯಿತು’ ಎಂದು ಸಾಹಿತಿ ಮೊಗಳ್ಳಿ ಗಣೇಶ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಜಾನಪದ ವಿಭಾಗ ಶುಕ್ರವಾರ ಹಮ್ಮಿಕೊಂಡಿದ್ದ ‘ಜಾನಪದ ಮತ್ತು ಜಾಗತೀಕರಣ– ಸಾಂಸ್ಕೃತಿಕ ಪಲ್ಲಟಗಳು’ ಕುರಿತು ಅವರು ಮಾತನಾಡಿದರು.

‘ಜಾಗತೀಕರಣ ದೇಶಕ್ಕೆ ಬಾರದೇ ಇದ್ದರೆ ನಾವಿನ್ನೂ ಅಸಮಾನತೆಯ ನಡುವೆಯೇ ಬಾಳಬೇಕಿತ್ತು. ಹಳ್ಳಿಗಳಲ್ಲಿದ್ದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯನ್ನು ಗುಣಪಡಿಸಿದ್ದೇ ಜಾಗತೀಕರಣ. ಸಂಸ್ಕೃತಿಯ ಹೆಸರಿನಲ್ಲಿ ಪ್ರತಿ ಜಾತಿಗಳಿಗೂ ಮೂಗುದಾರ ಹಾಕಿ ಅಭಿವೃದ್ಧಿಯಿಂದ ಜನರನ್ನು ವಿಮುಖಗೊಳಿಸಿದ್ದೇ ಭಾರತ ಸಮಾಜದ ಸಾಧನೆಯಾಗಿತ್ತು’ ಎಂದು ವಿಶ್ಲೇಷಿಸಿದರು.

ಜಾಗತಿಕ ಗ್ರಾಮ ಎಂಬ ಪರಿಕಲ್ಪನೆಯನ್ನು ಕೆನಡಾದ ವಿದ್ವಾಂಸ ಮಾರ್ಷಲ್ ಮ್ಯಾಕ್ಲುಹಾನ್ ಮಂಡಿಸಿದ್ದು ತಂತ್ರಜ್ಞಾನವನ್ನು ಮೆರೆಸುವ ಕಾರಣದಿಂದಲ್ಲ. ಜಾಗತೀಕರಣ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳ್ಳುವ ಮಾಧ್ಯಮ. ಸಮಾನತೆ ಪ್ರತಿಷ್ಠಾಪಿ
ಸಲು ಮುಕ್ತ ವಾತಾವರಣವಿರಬೇಕು ಎಂದು ಮಾರ್ಷಲ್ ಹೇಳಿದ್ದರು. ಅದಕ್ಕಾಗಿಯೇ ಮುಕ್ತ ಮಾರುಕಟ್ಟೆ ವಿಶ್ವದಲ್ಲಿ ಸ್ಥಾಪಿತಗೊಂಡಿತು. ಇದು ಭಾರತದಲ್ಲಿ ಆರ್ಥಿಕ ಶಕ್ತಿಯನ್ನು ಎಲ್ಲ ಜಾತಿ, ವರ್ಗಗಳಿಗೂ ನೀಡಿತು ಎಂದು ವ್ಯಾಖ್ಯಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.