ಹಾವೇರಿ: ‘ಕಾಂಗ್ರೆಸಿಗರು ರೂಢಿಗತ ಜೇಬುಗಳ್ಳರು. ಜನ ಅಧಿಕಾರದಿಂದ ದೂರವಿಟ್ಟು, ಶಿಕ್ಷೆ ನೀಡಿದ್ದರೂ ಬುದ್ಧಿ ಬಿಡುವುದಿಲ್ಲ. ಅಧಿಕಾರಕ್ಕೆ ಬಂದರೆಮತ್ತೆ ಅದೇ ಚಾಳಿ ಮುಂದುವರಿಸುತ್ತಾರೆ’ ಎಂದು ಸಂಸದ ಶಿವಕುಮಾರ್ ಉದಾಸಿ ವಾಗ್ದಾಳಿ ನಡೆಸಿದರು.

‘ಆ ಪಕ್ಷದ ಡಿಎನ್ಎಯಲ್ಲಿಯೇ‘ಬ್ಲೇಡ್ ಸಂಸ್ಕೃತಿ’ ಇದೆ. ಹೀಗಾಗಿ, ಕೇಂದ್ರ ಪುರಸ್ಕೃತ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ’ ಎಂದರು. ‘ಮೋದಿ ಮುಖ ತೋರಿಸಿ ಬಿಜೆಪಿ ಅಭ್ಯರ್ಥಿಗಳು ಮತ ಕೇಳುತ್ತಾರೆ’ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಗುರುವಾರ ಇಲ್ಲಿ ಪ್ರತಿಕ್ರಿಯೆ ನೀಡಿದರು.

ಯಾವುದೇ ವಿಚಾರದಲ್ಲಿ ‘pro and con' (ಸಾಧಕ–ಬಾಧಕ) ಇರುತ್ತದೆ. ಈ ಚುನಾವಣೆಯೂ ‘ಪ್ರೋಗ್ರೆಸ್ (ಅಭಿವೃದ್ಧಿ) ಮತ್ತು ಕಾಂಗ್ರೆಸ್’ ನಡುವಿನ ಚರ್ಚೆಯಾಗಿದೆ. ಕಾಂಗ್ರೆಸ್ ಎಂದರೆ ‘ಬಾಧಕಗಳ ವೃದ್ಧಿ’ ಎಂದರ್ಥ. ಮೋದಿಯ ವಿಶ್ವಾರ್ಹತೆಯಲ್ಲಿ ನಾವು ಮತ ಕೇಳುತ್ತಿದ್ದೇವೆ. ಅವರಿಗೆ ರಾಹುಲ್ ಗಾಂಧಿ ಹೆಸರು ಹೇಳಲು ಏಕೆ ಭಯ? ಎಂದು ಟಾಂಗ್ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.