ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ನ ಆಕಾರ ಮತ್ತು ಪೊಟ್ಟಣವನ್ನು ಕೇರಳ ಸೋಪ್ ಆ್ಯಂಡ್ ಆಯಿಲ್ಸ್ ನಕಲು ಮಾಡಿದೆ ಎಂದು ಕನ್ನಡ ಗೆಳೆಯರ ಬಳಗ ಆರೋಪಿಸಿದೆ.

‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ತಯಾರಿಸುವ ಮೈಸೂರು ಸ್ಯಾಂಡಲ್ ಸೋಪು ವಿದೇಶದಲ್ಲಿ ಕೂಡ ಜನಮನ್ನಣೆ ಪಡೆದಿದೆ. 2006ರಲ್ಲಿ ಭೌಗೋಳಿಕ ಕುರುಹು ದೊರೆತಿದೆ. ಕೇರಳ ಸ್ಯಾಂಡಲ್ ಸೋಪು ಕೂಡ ಮೈಸೂರು ಸ್ಯಾಂಡಲ್ ಸೋಪಿನ ಮಾದರಿಯಲ್ಲಿಯೇ ಇದೆ. ಆದರೆ, ಇದನ್ನು ಪ್ರಶ್ನಿಸಬೇಕಾಗಿದ್ದ ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ತಟಸ್ಥವಾಗಿದೆ. ಇದು ಖಂಡನೀಯ’ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.