ಸಾಹಿತ್ಯ ಹಬ್ಬ ಕಾರ್ಯಕ್ರಮದಲ್ಲಿ ತಂಬೂರಿ ಶಿವಣ್ಣ ಮತ್ತು ಅವರ ತಂಡವು ಮಂಟೇಸ್ವಾಮಿ ಪದಗಳನ್ನು ಹಾಡಿತು
‘ಟಿಪ್ಪು ದುರಂತ ನಾಯಕ’
‘ಹಲಗಲಿಯ ಬೇಡರು ಚನ್ನಮ್ಮನ ಮತ್ತು ರಾಯಣ್ಣನ ಲಾವಣಿಗಳು ಟಿಪ್ಪುವಿನ ಲಾವಣಿಗಳು ಇಂತಹ ಹತ್ತಾರು ಪ್ರತಿರೋಧಗಳನ್ನು ದಾಖಲಿಸಿವೆ. ಇವುಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮರುರಚಿಸಬೇಕಾಗುತ್ತದೆ. ಟಿಪ್ಪುವಿನ ಬಗ್ಗೆ ಏನೇನೋ ಚರ್ಚೆಗಳು ನಡೆಯುತ್ತವೆ. ಆದರೆ ಆತ ಒಬ್ಬ ದುರಂತ ನಾಯಕ ಎಂಬುದನ್ನು ಲಾವಣಿಗಳು ಹಿಡಿದಿಟ್ಟಿವೆ’ ಎಂದು ಸಂಧ್ಯಾರೆಡ್ಡಿ ಹೇಳಿದರು.
ಚರ್ಚೆಗಳು ಬದಲಾಗಿವೆ: ಕಂಬಾರ
‘ಈ ಹಿಂದೆ ನಡೆಯುತ್ತಿದ್ದ ಸಾಹಿತ್ಯ ಮತ್ತು ಚರ್ಚೆಗಳು ಒಂದು ರೀತಿಯಲ್ಲಿದ್ದವು. ಈಗ ಎಲ್ಲವೂ ಬದಲಾಗಿದೆ. ಮೊದಲು ಚರ್ಚೆ ನಡೆಸುತ್ತಿದ್ದಂತೆ ಈಗ ನಡೆಸಲು ಸಾಧ್ಯವಿಲ್ಲ’ ಎಂದು ನಾಟಕಕಾರ ಚಂದ್ರಶೇಖರ ಕಂಬಾರ ಹೇಳಿದರು. ಸಾಹಿತ್ಯ ಹಬ್ಬವನ್ನು ಉದ್ಘಾಟಿಸಿದ ಅವರು ‘ಹೀಗೆ ಎಲ್ಲವೂ ಬದಲಾಗಿರುವ ಹೊತ್ತಿನಲ್ಲಿ ನ್ಯಾಷನಲ್ ಕಾಲೇಜು ಸಾಹಿತ್ಯ ಹಬ್ಬವನ್ನು ಆರಂಭಿಸಿದೆ. ಅದನ್ನು ಎರಡನೇ ವರ್ಷವೂ ಮುನ್ನಡೆಸುತ್ತಿದೆ. ಇಲ್ಲಿಂದ ಸಾಹಿತ್ಯದ ಹೊಸ ಚರ್ಚೆಗಳು ಆರಂಭವಾಗಲಿ’ ಎಂದರು.