ಸಾಗರ: ‘ತನಗೆ ತಾನೇ ಹಾಕಿಕೊಂಡ ಮಾದರಿ, ಮೇಲ್ಪಂಕ್ತಿ, ಯಶಸ್ಸಿನ ಅಳತೆಗೋಲುಗಳ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆ, ಅದರಿಂದ ಹೊರಬರಲಾಗದೆ ಭಾರತದಲ್ಲಿ ಹಲವು ರೀತಿಯ ವಿಕೃತಿಗಳನ್ನು ಸೃಷ್ಟಿಸುತ್ತಿದೆ’ ಎಂದು ಗುಜರಾತ್‌ನ ಬರಹಗಾರ ತ್ರಿದೀಪ್ ಸುಹೃದ್ ಹೇಳಿದರು.

‘ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟು’ ಎಂಬ ವಿಷಯ ಆಧರಿಸಿ ಸಮೀಪದ ಹೆಗ್ಗೋಡಿನಲ್ಲಿ ಶನಿವಾರ ಆರಂಭಗೊಂಡ ‘ನೀನಾಸಂ ಸಂಸ್ಕೃತಿ ಶಿಬಿರ’ದಲ್ಲಿ ಅವರು ಉದ್ಘಾಟನಾ ಭಾಷಣ ಮಾಡಿದರು.

ದೇಹ, ಮನಸ್ಸು, ಆತ್ಮ ಇವುಗಳು ಸಂಪೂರ್ಣವಾಗಿ ಮಿಳಿತಗೊಂಡು ರೂಪುಗೊಳ್ಳಬೇಕಾದ ಶಿಕ್ಷಣ ಇಂದು ಕೇವಲ ‘ಬುದ್ಧಿ ಕೇಂದ್ರಿತ’ವಾಗಿದೆ. ಹೀಗಾಗಿ ದೇಹಕ್ಕೆ ಸೀಮಿತವಾಗಿದ್ದ ಅಸ್ಪೃಶ್ಯತೆಯ ಮನೋಭಾವ ವಸ್ತುಗಳಿಗೂ ವಿಸ್ತರಿಸುವಂತಾಗಿದೆ. ಈ ಮೂಲಕ ಶಿಕ್ಷಣ ಅಸಮಾನತೆ ಹಾಗೂ ಅಹಂಕಾರವನ್ನು ಬೆಳೆಸುತ್ತಿದೆ ಎಂದು ಅವರು ವಿಶ್ಲೇಷಿಸಿದರು.

ಗೋವಾದ ಪರಿಸರ ಹೋರಾಟಗಾರ ಕ್ಲಾಡ್ ಆಳ್ವಾರಸ್ ಮಾತನಾಡಿದರು.

ಯುರೋಪ್ ಪ್ರಣೀತ ಶಿಕ್ಷಣ ಪದ್ಧತಿ ಇಂದಿಗೂ ಭಾರತವನ್ನು ಆಕ್ರಮಿಸಿಕೊಂಡಿದೆ. ಸೃಜನಶೀಲತೆಯನ್ನು ಕಲಿಸುವ ಲಕ್ಷಣಗಳೇ ಈ ಪದ್ಧತಿಯಲ್ಲಿ ಇಲ್ಲ.
–ಕ್ಲಾಡ್ ಆಳ್ವಾರಸ್, ಗೋವಾದ ಪರಿಸರ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.