ಜಂಟಿ ನಿಬಂಧಕರ ಕಚೇರಿಯಲ್ಲಿ ದಾವೆ
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 70ರಡಿ ಸಂಘಗಳು ಅಥವಾ ಸಂಘದ ಸದಸ್ಯರು ಬಾಧಿತರಾಗಿದ್ದರೆ ದಾವೆ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಕಲಂ 70ರಡಿ ದಾಖಲಾಗುವ ದಾವೆ ಪ್ರಕರಣಗಳ ವಿಚಾರಣೆಯನ್ನು ವಾರದಲ್ಲಿ ಎರಡು ದಿನ ಜಂಟಿ ನಿಬಂಧಕರ ಕಚೇರಿಯಲ್ಲಿ ನಡೆಸಲಾಗುತ್ತದೆ. ಸಹಕಾರ ಸಂಘಗಳ ಜಂಟಿ ನಿಬಂಧಕರು ಅರೆನ್ಯಾಯಿಕ ಪ್ರಾಧಿಕಾರ ಆಗಿರುತ್ತಾರೆ. ಈ ರೀತಿ ದಾಖಲಾದ ದಾವೆಗಳನ್ನು ಕಾಯ್ದೆ ಕಲಂ 71ರಡಿ ಇತ್ಯರ್ಥಪಡಿಸಲು ಕೂಡಾ ಅವಕಾಶ ಕಲ್ಪಿಸಲಾಗಿದೆ. ಅದರಂತೆ, ತಮ್ಮ ವ್ಯಾಪ್ತಿಯ ನಿಬಂಧಕರು, ತಾವೇ ವಿಚಾರಣೆ ನಡೆಸ ಬಹುದು ಅಥವಾ ಗೌರವ ಮಧ್ಯಸ್ಥದಾರರಿಗೆ ಅಥವಾ ಇಲಾಖೆಯ ಮಧ್ಯಸ್ಥದಾರ ರಿಗೆ ವಹಿಸಿಕೊಡಬಹುದು. ಪ್ರಾದೇಶಿಕ ಜಂಟಿ ನಿಬಂಧಕರ ವ್ಯಾಪ್ತಿಯು 6–7 ಜಿಲ್ಲೆಗಳಿಗೆ ವ್ಯಾಪಿಸಿದ್ದು, ಅವರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಸಭೆಗಳಲ್ಲಿ ಭಾಗವಹಿಸುವ ಜೊತೆಗೆ, ಪ್ರತಿ ತಿಂಗಳು ನಡೆಯುವ ಇಲಾಖಾ ಸಭೆಗಳಲ್ಲಿ ಹಾಜರಾಗಬೇಕು ಎಂದು ಸಹಕಾರ ಇಲಾಖೆಯ ಮೂಲಗಳು ತಿಳಿಸಿವೆ.