ಬೆಂಗಳೂರು: ‘ಗ್ಯಾರಂಟಿಗಳ ಭರವಸೆ ನೀಡುವಾಗ ನಿಮ್ಮ ತಲೆಯಲ್ಲಿ ಮೆದುಳು ಇರಲಿಲ್ಲವೇ’ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡ ಬಿ.ಕೆ.ಚಂದ್ರಶೇಖರ್ ಖಂಡಿಸಿದ್ದಾರೆ.

ಶೋಭಾ ಅವರ ಪ್ರಶ್ನೆ ಔಚಿತ್ಯವನ್ನು ಮೀರಿದ್ದು, ಅವರ ಪರಾಕ್ರಮದ ಪ್ರದರ್ಶನವಾಗಿದೆ. 2016ರಲ್ಲಿ ಬಿಜೆಪಿ ಪ್ರಕಟಿಸಿದ ‘ಲೋಕ ಸಭಾ ಸಂಕಲ್ಪ ಪತ್ರ’ದಲ್ಲಿ ದೇಶದ ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುತ್ತೇವೆ ಎಂದು ಘೋಷಿಸಿದ್ದರು. ಆದಾಯ ದ್ವಿಗುಣವಾಗಿದೆಯೇ? ಘೋಷಿಸುವಾಗ ಅವರಿಗೆ ಮೆದುಳು ಇರಲಿಲ್ಲವೇ ಎನ್ನುವ ಪ್ರಶ್ನೆಯನ್ನು ನಾಗರಿಕ ಸಮಾಜ ಒಪ್ಪುತ್ತದೆಯೇ ಎಂದಿದ್ದಾರೆ.

ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷ ಲಕ್ಷಾಂತರ ರೈತರು ಧರಣಿ ನಡೆಸಿದಾಗ ಪ್ರಧಾನಿ ಅವರು ಸೌಜನ್ಯಕ್ಕಾದರೂ ಧರಣಿ ನಿರತರನ್ನು ಭೇಟಿ ಮಾಡಲಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ‘ಕೇಂದ್ರಕ್ಕೆ ಕರ್ನಾಟಕವಷ್ಟೇ ಮುಖ್ಯವಲ್ಲ’ ಎಂದಿದ್ದಾರೆ. ಹಾಗಾದರೆ, ಕೇಂದ್ರಕ್ಕೆ ಮಣಿಪುರ ರಾಜ್ಯದ ಜವಾಬ್ದಾರಿ ಇಲ್ಲವೇ? ಬಿಜೆಪಿ ಪ್ರಣಾಳಿಕೆಯಲ್ಲಿ ಸಹಭಾಗಿತ್ವ ಒಕ್ಕೂಟದ ಭರವಸೆ ನೀಡಿದ್ದರೂ ರಾಜ್ಯಕ್ಕೆ ಅಕ್ಕಿ ಕೊಡಬೇಕಿತ್ತು ಅಲ್ಲವೇ ಎಂದೂ ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.