ಬೆಂಗಳೂರು: ಎಂ.ಬಿ.ಎ, ಎಂ.ಸಿ.ಎ, ಎಂ.ಇ, ಎಂ.ಟೆಕ್ ಹಾಗೂ ಎಂ.ಆರ್ಕ್ ಸೇರಿದಂತೆ ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಆಪ್ಷನ್ ದಾಖಲಿಸಲು ನ. 8 ಕೊನೆಯ ದಿನ. 9ರಂದು ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ಅಣಕು ಫಲಿತಾಂಶ ನಂತರ ನ.9ರಿಂದ 12ರ ಬೆಳಿಗ್ಗೆ 11ರವರೆಗೆ ಅಗತ್ಯ ಇದ್ದರೆ ಆಪ್ಷನ್ ಬದಲಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಅಂದೇ ಸಂಜೆ 6ಕ್ಕೆ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.

ಚಾಯ್ಸ್ ದಾಖಲಿಸಲು ನ.13ರಿಂದ 14ರವರೆಗೆ ಅವಕಾಶ ಇರುತ್ತದೆ. ಚಾಯ್ಸ್-1 ಮತ್ತು 2 ಅನ್ನು ಆಯ್ಕೆ ಮಾಡಿದವರು ಶುಲ್ಕ ಪಾವತಿ ಮಾಡಬೇಕು. ಚಾಯ್ಸ್-1 ದಾಖಲಿಸಿದವರು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನ. 16ರೊಳಗೆ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕು.

ಪಿಜಿ ಆಯುಷ್ ಮೊದಲ ಸುತ್ತು:

ಪಿಜಿ ಆಯುಷ್ ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ನ.8ರ ಮಧ್ಯಾಹ್ನ 1ರವರೆಗೆ ಆಪ್ಷನ್ ದಾಖಲಿಸಿಕೊಳ್ಳಬಹುದು. ಅಂದೇ ಸಂಜೆ 8ಕ್ಕೆ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ನ.11ರ ಬೆಳಿಗ್ಗೆ 11ರವರೆಗೆ ಆಪ್ಷನ್ ಬದಲಿಸಿಕೊಳ್ಳಲು ಅವಕಾಶ ನೀಡುತ್ತಿದ್ದು, ಅಂದೇ ಸಂಜೆ 6ಕ್ಕೆ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗತ್ತದೆ.

ನ.11ರಿಂದ 12ರವರೆಗೆ ಚಾಯ್ಸ್ ದಾಖಲಿಸಬೇಕು. ನಂತರ ಶುಲ್ಕ ಪಾವತಿಸಿ ಕಾಲೇಜಿಗೆ ಪ್ರವೇಶ ಪಡೆಯಲು ನ.14ರವರೆಗೆ ಅವಕಾಶ ಇರುತ್ತದೆ ಎಂದು ಪ್ರಸನ್ನ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.