ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹತ್ತಿರವಿರುವ ಕೋಲಾರ ಅಥವಾ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫಾರ್ಮಾಸುಟಿಕಲ್ ಪಾರ್ಕ್ ಸ್ಥಾಪಿಸಲು ತೀರ್ಮಾನಿಸಿದ್ದು, ಇದಕ್ಕೆ ಔಷಧ ತಯಾರಿಕಾ ಕ್ಷೇತ್ರದಲ್ಲಿರುವ ಪರಿಣಿತ ಉದ್ಯಮಿಗಳು ಮತ್ತು ವಿಜ್ಞಾನಿಗಳ ಸಲಹೆಗಳನ್ನು ಪಡೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಖನಿಜ ಭವನದಲ್ಲಿ ನಡೆದ ಇಂಡಸ್ಟ್ರಿ 5.0 ಮತ್ತು ಫಾರ್ಮಾಸುಟಿಕಲ್ಸ್ ವಿಷನ್ ಗ್ರೂಪ್ಗಳ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ವಿವಿಧ ಔಷಧ ತಯಾರಿಕಾ ಕಂಪನಿಗಳ ಪ್ರಮುಖರೊಂದಿಗೆ ಅವರು ಮಾತನಾಡಿದರು.

ವಿದೇಶಿ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡಲು ಹತ್ತು ಕ್ಷೇತ್ರಗಳನ್ನು ಆಕರ್ಷಣೀಯವೆಂದು ಗುರುತಿಸಿದ್ದು, ಇವುಗಳಲ್ಲಿ ಫಾರ್ಮಸುಟಿಕಲ್ಸ್ ಕೂಡ ಒಂದಾಗಿದೆ. ಈ ಕ್ಷೇತ್ರವು ವರ್ಷಕ್ಕೆ ಶೇ 11 ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದ್ದು, ಮುಂದಿನ ಆರು ವರ್ಷಗಳಲ್ಲಿ ಇದರ ವಾರ್ಷಿಕ ವಹಿವಾಟು 130 ಬಿಲಿಯನ್ ಡಾಲರ್ ಮುಟ್ಟಲಿದೆ. ಕೈಗೆಟುಕುವ ಔಷಧಿಗಳು, ಲಸಿಕೆಗಳು ಮತ್ತು ಔಷಧೋತ್ಪನ್ನಗಳ ಗರಿಷ್ಠ ರಫ್ತು ವಹಿವಾಟು ಇದಕ್ಕೆ ಕಾರಣ ಎಂದು ಅವರು ಹೇಳಿದರು.

‘ಔಷಧ ಕ್ಷೇತ್ರದಿಂದ ಬರುತ್ತಿರುವ ವರಮಾನದಲ್ಲಿ ರಾಜ್ಯದ ಕೊಡುಗೆ ಶೇ 11 ರಷ್ಟಿದೆ. ಜತೆಗೆ ಬಯೋಟೆಕ್ ವಲಯದ ಆದಾಯ ಮತ್ತು ನಿರ್ಯಾತದಲ್ಲಿ ನಮ್ಮ ಕೊಡುಗೆ ಶೇ 60 ರಷ್ಟಿದೆ. ಬೇರೆ ಯಾವ ರಾಜ್ಯಗಳೂ ಈ ವಿಷಯದಲ್ಲಿ ನಮ್ಮ ಸನಿಹದಲ್ಲೂ ಇಲ್ಲ. ಈ ಸಾಧನೆಯನ್ನು ಇನ್ನಷ್ಟು ವ್ಯಾಪಕಗೊಳಿಸಿ, ಬಂಡವಾಳ ಆಕರ್ಷಿಸಲಾಗುವುದು’ ಎಂದರು.

‘ಡಾಬಸ್ಪೇಟೆ ಬಳಿ ಅಸ್ತಿತ್ವಕ್ಕೆ ಬರುತ್ತಿರುವ ಕ್ವಿನ್ ಸಿಟಿಯನ್ನು ಜಾಗತಿಕ ಮಟ್ಟದ ನಾವೀನ್ಯತೆಯ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಪಾಟೀಲ ಹೇಳಿದರು.

ಸಭೆಯಲ್ಲಿ ಉದ್ಯಮಿಗಳಾದ ರೆಡ್ಡಿ ಲ್ಯಾಬೊರೇಟರೀಸ್ ಮುಖ್ಯಸ್ಥ ಜಿ.ವಿ.ಪ್ರಸಾದ್, ಬಯೋಕಾನ್ ಸಿಇಒ ಸಿದ್ದಾರ್ಥ ಮಿತ್ತಲ್, ಶಿಲ್ಪಾ ಬಯೊಲಾಜಿಕಲ್ಸ್ ನಿರ್ದೇಶಕ ವಿಷ್ಣುಕಾಂತ್ ಭೂತದ, ಸಿಪ್ಲಾ ಕಂಪನಿಯ ಅಧಿಕಾರಿ ರಾಜೀವ್ ಕುಮಾರ್ ಸಿನ್ಹಾ, ಲಾಗ್9 ಸಂಸ್ಥಾಪಕ ಅಕ್ಷಯ್ ಸಿಂಘಾಲ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.