ಬೆಂಗಳೂರು: ಯಾವುದೇ ವ್ಯಕ್ತಿ ಶೇ 40ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿದ್ದರೂ ಅವರಿಗೆ ಅಂಗವೈಕಲ್ಯ ಪ್ರಮಾಣ ಪತ್ರ ಹಾಗೂ ಯುಡಿಐಡಿ ಕಾರ್ಡ್ (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ವಿತರಣೆ ಮಾಡಬಹುದು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಇಲಾಖೆಯ ಆಯುಕ್ತ ಡಿ. ರಂದೀಪ್, ‘ಅಧಿಸೂಚಿತ ವೈದ್ಯಕೀಯ ಅಧಿಕಾರಿಗಳು ಅಂಗವೈಕಲ್ಯ ಪ್ರಮಾಣ ಪತ್ರಗಳು ಹಾಗೂ ಯುಡಿಐಡಿ ಕಾರ್ಡ್ಗಳನ್ನು ಯುಡಿಐಡಿ ಪೋರ್ಟಲ್ ಮೂಲಕವೇ ನೀಡಬೇಕು’ ಎಂದು ತಿಳಿಸಿದ್ದಾರೆ.

2016ರ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ಪ್ರಕಾರ, ಯುಡಿಐಡಿ ಕಾರ್ಡ್ ನೀಡಲು ಶೇ 40ಕ್ಕಿಂತ ಕಡಿಮೆ ಅಂಗವಿಕಲತೆ ಇರಬಾರದೆಂಬ ಯಾವುದೇ ಷರತ್ತುಗಳಿಲ್ಲ. ಹಾಗಾಗಿ, ಶೇ 40ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೂ ಪ್ರಮಾಣ ಪತ್ರ ಹಾಗೂ ಯುಡಿಐಡಿ ಕಾರ್ಡ್ಗಳನ್ನು ನೀಡಬೇಕು ಎಂದು ಎಲ್ಲ ವೈದ್ಯಕೀಯ ಪ್ರಾಧಿಕಾರಗಳ ಅಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.