ನವದೆಹಲಿ: ಭಾರತವು ಆರ್ಥಿಕವಾಗಿ ಉತ್ತುಂಗಕ್ಕೆ ಏರಲು ಯುವಜನರು ವಾರದಲ್ಲಿ 70 ತಾಸು ದುಡಿಯಬೇಕೆಂಬ ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಹೇಳಿಕೆಗೆ ಕರ್ನಾಟಕದ ಮಾಹಿತಿ ತಂತ್ರಜ್ಞಾನ (ಐಟಿ) ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನಾರಾಯಣಮೂರ್ತಿ ಅವರು ಕಠಿಣ ಪರಿಶ್ರಮದಿಂದ ಇನ್ಫೊಸಿಸ್ ಸಂಸ್ಥೆಯನ್ನು ಕಟ್ಟಿದರು. ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಭಾರತದ ಭವಿಷ್ಯದ ದೃಷ್ಟಿಯಿಂದ ಇದೊಂದು ಉತ್ತಮ ಸಲಹೆ. ಅದನ್ನು ನಾನು ಸ್ವಾಗತಿಸುತ್ತೇನೆ’ ಎಂದರು.

‘ಮೂರ್ತಿಯವರ ಅಭಿಪ್ರಾಯಕ್ಕೆ ನಾನು ಇನ್ನೊಂದು ವಿಷಯ ಸೇರಿಸಲು ಬಯಸುತ್ತೇನೆ. ನಾವು ಹೆಚ್ಚು ಉತ್ಪಾದಕ ಕೆಲಸಗಳತ್ತ ಗಮನ ಹರಿಸಬೇಕು. ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲು ಭಾರತವು ತನ್ನ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.
.ಆಳ–ಅಗಲ | ವಾರದಲ್ಲಿ 70 ಗಂಟೆ ಕೆಲಸ: ಕೆಲವರ ಬೆಂಬಲ, ಹಲವರ ಆಕ್ರೋಶ.ನಾರಾಯಣಮೂರ್ತಿ ವಾರಕ್ಕೆ 80ರಿಂದ 90 ಗಂಟೆ ದುಡಿದಿದ್ದಾರೆ: ಸುಧಾ ಮೂರ್ತಿ.ವಾರಕ್ಕೆ 70 ಗಂಟೆ ದುಡಿಮೆ: ಚರ್ಚೆ ಹುಟ್ಟುಹಾಕಿದ ಇನ್ಫೊಸಿಸ್ ನಾರಾಯಣಮೂರ್ತಿ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.