ಬೆಂಗಳೂರು: 2006ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರವು ಐಐಎಂ, ಐಐಟಿಯಂಥ ಉನ್ನತ ಶಿಕ್ಷಣದಲ್ಲೂ ಮೀಸಲಾತಿ ಜಾರಿಗೆ ತಂದಿದ್ದನ್ನು ಖಂಡಿಸಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಈಗ ಮೀಸಲಾತಿ ಪರವಾಗಿ ಹೇಳಿಕೆ ನೀಡಿರುವುದು ಅವಕಾಶವಾದಿ ನಿಲುವಲ್ಲವೇ ಎಂದು ಕಾಂಗ್ರೆಸ್ ಮುಖಂಡ ಪ್ರೊ. ಬಿ.ಕೆ. ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

‘ನಮ್ಮ ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಇರಲಿ’ ಎಂದು ಈಗ ಭಾಗವತ್ ಹೇಳಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರುವಾಗುತ್ತಿರುವಾಗ ಈ ರೀತಿಯ ಹೇಳಿಕೆ ನೀಡಿರುವುದು ಅವಕಾಶವಾದಿ ರಾಜಕಾರಣ ಅಲ್ಲವೇ ಎಂದು ಕೇಳಿದ್ದಾರೆ.

ಎರಡು ದಿನಗಳ ಹಿಂದೆ ನಾಗಪುರದಲ್ಲಿ ಭಾಗವತ್ ನೀಡಿದ್ದ ಹೇಳಿಕೆಗೆ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.

‘ಆರೆಸ್ಸೆಸ್ ಪತ್ರಿಕೆ ‘ಆರ್ಗನೈಸರ್’ನ 2006 ಜೂನ್ 18ರ ಸಂಚಿಕೆಯಲ್ಲಿ ‘ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮೀಸಲಾತಿ ಎನ್ನುವುದು ಸಮಾಜವನ್ನು ಹಿಂದಕ್ಕೆ ಚಲಿಸುವ ಹೆಜ್ಜೆ. ಪ್ರಾಥಮಿಕ ಶಿಕ್ಷಣ ನಮ್ಮ ಹಕ್ಕು. ಆದರೆ, ಉನ್ನತ ಶಿಕ್ಷಣ ನಮ್ಮ ಹಕ್ಕಲ್ಲ. ಅದು ನಮ್ಮ, ನಮ್ಮ ಸಾಧನೆ ಆಧಾರಿತವಾದದ್ದು. ಕಾಂಗ್ರೆಸ್ ನೇತೃತ್ವದ ಸರ್ಕಾರ ಅರ್ಹತೆ, ಯೋಗ್ಯತೆಗಷ್ಟೇ ಪ್ರವೇಶ ಇರುವ ಕಡೆಯ ಭದ್ರಕೋಟೆಯನ್ನು ಮೀಸಲಾತಿ ಕಲ್ಪಿಸುವ ಮೂಲಕ ಭೇದಿಸಿದೆ. ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ, ಐಐಎಂ, ಐಐಟಿ ಇತ್ಯಾದಿ ಶೈಕ್ಷಣಿಕ ಸಂಸ್ಥೆಗಳಿಗೆ ಅರ್ಹತೆಯನ್ನು ಕಡೆಗಣಿಸಿ, ಮೀಸಲಾತಿ ಕೋಟಾದಲ್ಲಿ ಪ್ರವೇಶ ಕಲ್ಪಿಸಿದೆ’ ಎಂದು ಭಾಗವತ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.