ವಿಧಾನಸಭೆ: ‘ಎಂಟು ಜನ ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿದ್ದೇನೆ. ಹಾಗಿರುವಾಗ ಮಂತ್ರಿಗಿರಿಯಂತಹ ಸಣ್ಣಪುಟ್ಟ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಕಾಂಗ್ರೆಸ್‌ನ ಆರ್.ವಿ. ದೇಶಪಾಂಡೆ ಹೇಳಿದರು.

ಹುಬ್ಬಳ್ಳಿ–ಧಾರವಾಡಕ್ಕೆ ಕೈಗಾರಿಕೆಗಳನ್ನು ತಂದಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿದ ಬಿಜೆಪಿಯ ಆರಗ ಜ್ಞಾನೇಂದ್ರ, ‘ನಿಮ್ಮನ್ನು ಹಿಂದಿನ ಸೀಟಿಗೆ ತಳ್ಳಿರುವುದು ಸರಿಯಲ್ಲ’ ಎಂದು ದೇಶಪಾಂಡೆ ಅವರನ್ನು ಉದ್ದೇಶಿಸಿ ಹೇಳಿದರು.

‘ಆಶೀರ್ವಾದ ಮಾಡುವವರು ಹಿಂದಿನಿಂದ ಮಾಡುವವರಲ್ಲವೇ. ಅವರು ಹಿರಿಯರು’ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಆಗ ಮಾತನಾಡಿದ ದೇಶಪಾಂಡೆ, ‘ಹಿಂದಿನ ಆಸನವನ್ನೇ ಕೊಡಿ ಎಂದು ಕೇಳಿ ಪಡೆದಿದ್ದೇನೆ. ದೇವೇಗೌಡರು, ಎಸ್.ಎಂ.ಕೃಷ್ಣ, ಸಿದ್ದರಾಮಯ್ಯನವರಂತಹ ದೊಡ್ಡವರ ಜತೆ ಕೆಲಸ ಮಾಡಿದ್ದೇನೆ. ಅಧಿಕಾರ ಬರುತ್ತದೆ ಹೋಗುತ್ತದೆ. ಅಂತಹ ವಿಷಯಗಳು ಪ್ರಮುಖವಲ್ಲ’ ಎಂದರು.

ಕಾಂಗ್ರೆಸ್‌ನ ಅಪ್ಪಾಜಿ ನಾಡಗೌಡ, ‘ದೇಶಪಾಂಡೆಯವರು ಸಚಿವರಾಗದೇ ಇರುವುದು ನಮಗಷ್ಟೇ ಅಲ್ಲ; ರಾಜ್ಯಕ್ಕೂ ನಷ್ಟ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.