ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿಕಾಣಿಸಿಕೊಂಡಿದ್ದು, ಮಂಗಳವಾರ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆಎಂದುಹವಾಮಾನಇಲಾಖೆ ಅಂದಾಜಿಸಿದೆ.

‘ಮಂಡ್ಯ, ಮೈಸೂರು, ಚಿಕ್ಕಮಗಳೂರು ಹಾಗೂ ಹಾಸನ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ’ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದರು.

‘ಸೋಮವಾರ,ಕೊಡಗು 50, ಹಾಸನ ಹಾಗೂ ಚಿಕ್ಕಮಗಳೂರಿನ ವಿವಿಧೆಡೆ 10ರಿಂದ 12ಮೀ.ಮೀ ಪ್ರಮಾಣದ ಮಳೆಯಾಗಿದೆ’.ಆದರೆ,ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ 39, ಕಲಬುರ್ಗಿ 38.5, ರಾಯಚೂರು 40 ಸೇರಿದಂತೆ ವಿವಿಧೆಡೆ36 ರಿಂದ 37ಡಿಗ್ರಿ ಸೆಲ್ಸಿಯಸ್ ಗರಿಷ್ಟ ತಾಪಮಾನ ದಾಖಲಾಗಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದರು.

‘ಮೇಲ್ಮೈ ಸುಳಿಗಾಳಿಯಿಂದಾಗಿ ಕಳೆದ ಎರಡು ದಿನಗಳಿಂದದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿಕಳೆದ ಮೂರು ದಿನಗಳಲ್ಲಿ ಇದ್ದ ಗರಿಷ್ಟ ತಾಪಮಾನಕ್ಕೆ ಹೋಲಿಸಿದರೆ ಸದ್ಯ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ಗರಿಷ್ಟ ತಾಪಮಾನ 34ಕ್ಕೆ ಇಳಿಕೆಯಾಗಿದೆ’.

‘ಆದರೆ, ಉತ್ತರ ಒಳನಾಡಿನಲ್ಲಿ ಮಾತ್ರ ವಾಡಿಕೆಗಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಟ ತಾಪಮಾನ ಏರಿಕೆ ಕಂಡಿದೆ. ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ 41ಡಿಗ್ರಿ ಸೆಲ್ಸಿಸ್‌ನಷ್ಟು ಗರಿಷ್ಟ ತಾಪಮಾನ ದಾಖಲಾಗಿದೆ’ ಎಂದರು.

ಎಲ್ಲಿ, ಎಷ್ಟು ಬಿಸಿಲು( ಡಿಗ್ರಿ ಸೆಲ್ಸಿಯಸ್‌ನಲ್ಲಿ)

ಬೆಂಗಳೂರು- 34

ಬಳ್ಳಾರಿ - 39

ಕೊಪ್ಪಳ - 39

ಕಲಬುರ್ಗಿ - 41

ರಾಯಚೂರು - 40

ಗದಗ - 37

ಮೈಸೂರು - 35

ಚಿತ್ರದುರ್ಗ- 36

ಬೆಳಗಾವಿ(ವಿಮಾನ ನಿಲ್ದಾಣ ಸುತ್ತಮುತ್ತ)-37

ಕಾರವಾರ - 34

ವಿಜಯಪುರ -38

ಮಡಿಕೇರಿ -29

ಧಾರವಾಡ - 36

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.