‘ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಶೋಯಬ್ ಅಹ್ಮದ್ ಮಿರ್ಝಾ ಎಂಬಾತ ಅಬ್ದುಲ್ ಮಥೀನ್ ತಾಹಾನನ್ನು ಲಷ್ಕರ್–ಎ–ತಯಬಾ ಉಗ್ರ ಸಂಘಟನೆಯು ಬೆಂಗಳೂರು ಬಾಂಬ್ ಸ್ಫೋಟಕ್ಕೆ ನಡೆಸಿದ ಸಂಚಿನ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೊಹಮ್ಮದ್ ಶಾಹೀದ್ ಫೈಸಲ್ ಎಂಬಾತನಿಗೆ ಪರಿಚಯಿಸಿದ್ದ. ತನ್ನ ‘ಹ್ಯಾಂಡ್ಲರ್’ ಆಗಿದ್ದ ಫೈಸಲ್‌ನನ್ನು ನಂತರದ ದಿನಗಳಲ್ಲಿ ತಾಹಾ, ಅಲ್ ಹಿಂದ್ ಐಎಸ್ ಭಯೋತ್ಪಾದನಾ ಚಟುವಟಿಕೆ ಪ್ರಕರಣದ ಆರೋಪಿ ಮೆಹಬೂಬ್ ಪಾಷಾ ಎಂಬಾತನಿಗೆ ಪರಿಚಯಿಸಿದ್ದ. ದಕ್ಷಿಣ ಭಾರತದಲ್ಲಿ ಐಎಸ್ ಚಟುವಟಿಕೆಗಳ ಉಸ್ತುವಾರಿ ಹೊತ್ತಿದ್ದ ಖಾಜಾ ಮೊಹಿದ್ದೀನ್ ಮತ್ತು ಅಮೀರ್ ಎಂಬುವವರಿಗೂ ಪರಿಚಯಿಸಿದ್ದ. ಕೊನೆಯಲ್ಲಿ ಫೈಸಲ್‌ನನ್ನು ಮಾಜ್ ಮುನೀರ್ ಅಹ್ಮದ್‌ಗೂ ಪರಿಚಯಿಸಿದ್ದ’ ಎಂದು ಎನ್‌ಐಎ ಆರೋಪಪಟ್ಟಿ ಹೇಳಿದೆ.