ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು (ಆರ್ಜಿಯುಎಚ್ಎಸ್) ಪರೀಕ್ಷೆ ಮುಗಿದ 24 ತಾಸುಗಳಲ್ಲಿಯೇ ನರ್ಸಿಂಗ್ ಕೋರ್ಸ್ಗಳ ಫಲಿತಾಂಶ ಪ್ರಕಟಿಸುವ ಮೂಲಕ ವಿಶಿಷ್ಟ ದಾಖಲೆ ಮಾಡಿದೆ.

ಬಿಎಸ್ಸಿ ನರ್ಸಿಂಗ್ನ ಮೊದಲ ಮತ್ತು 3ನೇ ವರ್ಷದ ಪರೀಕ್ಷೆಗಳ ಫಲಿತಾಂಶವನ್ನು ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆ ಮುಗಿದ ಒಂದು ದಿನದೊಳಗೇ ಫಲಿತಾಂಶ ಪ್ರಕಟಿಸಲಾಗಿದೆ. ಫೆ.8ರಿಂದ 22ರವರೆಗೆ ಲಿಖಿತ ಪರೀಕ್ಷೆ, 26ರಿಂದ ಮಾ.9ರವರೆಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆ ನಡೆದಿದ್ದು, ಮಾ.10ಕ್ಕೆ ಫಲಿತಾಂಶ ಘೋಷಿಸಲಾಗಿದೆ.

‘4,77,701 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗಿದೆ. ಎಲ್ಲ ಪತ್ರಿಕೆಗಳನ್ನು ಅಚ್ಚುಕಟ್ಟಾಗಿ ಸ್ಕ್ಯಾನ್ ಮಾಡಿ ಡಿಜಿಜಲ್ ರೂಪದಲ್ಲಿ ಮೌಲ್ಯಮಾಪನ ಮಾಡಿದ್ದರಿಂದ 24 ತಾಸಿನೊಳಗೇ ಫಲಿತಾಂಶ ನೀಡಲು ಸಾಧ್ಯವಾಗಿದೆ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಹೇಳಿದರು.

‘ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲಾಗಿತ್ತು. ಸ್ಕ್ಯಾನ್ ಮಾಡಿದ್ದರಿಂದ ಮೌಲ್ಯಮಾಪಕರಿಗೂ ಡಿಜಿಟಲ್ ರೂಪದಲ್ಲಿ ಉತ್ತರ ಪತ್ರಿಕೆಗಳು ಸಿಕ್ಕಿದ್ದರಿಂದ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಮೌಲ್ಯಮಾಪನ ಮಾಡಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ ಹೇಳಿದರು.

ಈ ಹಿಂದಿನ ವರ್ಷಗಳಲ್ಲಿ ನರ್ಸಿಂಗ್ ಕೋರ್ಸ್ಗಳಿಗೆ ಸುಮಾರು 2.5 ಲಕ್ಷದವರೆಗೆ ಉತ್ತರ ಪತ್ರಿಕೆಗಳು ಇರುತ್ತಿದ್ದವು. ಇಷ್ಟೇ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಲು ಒಂದು ತಿಂಗಳವರೆಗೆ ಸಮಯ ಬೇಕಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.