ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇನ್ನು ಮುಂದೆ ನಡೆಸುವ ಎಲ್ಲ ಪರೀಕ್ಷೆಗಳಿಗೂ ಕ್ಯೂಆರ್ ಕೋಡ್ ಒಳಗೊಂಡ ಪ್ರವೇಶಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಿದೆ.

ಪರೀಕ್ಷಾ ಅಕ್ರಮಗಳನ್ನು ತಡೆಯುವ ಹಾಗೂ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಸಹಕಾರಿಯಾಗುವ ಈ ಹೊಸ ಪದ್ಧತಿ ಇದೇ ಏಪ್ರಿಲ್‌ನಿಂದ ಆರಂಭವಾಗುವ ಪರೀಕ್ಷೆಗಳಿಗೂ ಅನ್ವಯವಾಗಲಿದೆ. ವಿಶ್ವವಿದ್ಯಾಲಯದ ಜತೆಗೆ ಎಲ್ಲ ಸಂಯೋಜಿತ ಕಾಲೇಜುಗಳು ನಡೆಸುವ ಪರೀಕ್ಷೆಗಳಲ್ಲೂ ಇದೇ ಮಾದರಿ ಬಳಸಲಾಗುತ್ತದೆ ಎಂದು ಕುಲಪತಿ ಎಂ.ಕೆ. ರಮೇಶ್ ಹೇಳಿದ್ದಾರೆ.

ಪ್ರತಿ ಪ್ರವೇಶಪತ್ರದಲ್ಲೂ ಆಯಾ ವಿದ್ಯಾರ್ಥಿಗಳ ಭಾವಚಿತ್ರ, ಸಂಪೂರ್ಣ ಮಾಹಿತಿ ಒಳಗೊಂಡ ವಿಶಿಷ್ಟ ಕ್ಯೂಆರ್ ಕೋಡ್ ಅಳವಡಿಸಲಾಗಿರುತ್ತದೆ. ಪರೀಕ್ಷಾ ಮೇಲ್ವಿಚಾರಕರು, ವಿಚಕ್ಷಣ ದಳದ ಸಿಬ್ಬಂದಿ ಸ್ಕ್ಯಾನ್ ಮಾಡುವ ಮೂಲಕ ವಿದ್ಯಾರ್ಥಿಗಳ ವಿವರ ಪಡೆಯಬಹುದು. ಅಸಲಿ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿರುವ ಕುರಿತು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.